ಗದಗ: ಕೇವಲ ಮೂರುವರೆ ವರ್ಷದ ಈ ಪೋರನ ಹೆಸರು ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್‌ಗೆ ಸೇರುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸಮೀಪದ ಯಲವಿಗಿ ಗ್ರಾಮದ ಶಂಕರ ಪ್ರಭು ಗಡೆಪ್ಪನವರ ಎಂಬ ತನ್ನ ಅಗಾದ ನೆನಪಿನ ಶಕ್ತಿಯ ಮೂಲಕ ಸುಮಾರು 1 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಚಾಣಾಕ್ಷತನ ಹೊಂದಿದ್ದಾನೆ. ಬಾಲಕನ ತಂದೆ ಪ್ರಭು ಅವರ ಮಾರ್ಗದರ್ಶನದಲ್ಲಿ ಹಾಗೂ ತಾನು ಓದುತ್ತಿರುವ ಶಾಲೆಯ ಶಿಕ್ಷಕರ ಮಾರ್ಗದರ್ಶನದಿಂದ ಇಂತಹ ಸಾಧನೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಶಂಕರನ ಹೆಸರು ಇದೀಗ ಇಂಡಿಯನ್ ಬುಕ್ಸ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಮಗುವಿನ ಕೌಶಲ್ಯಕ್ಕೆ ಮಾರು ಹೋದ ಗ್ರಾಮಸ್ಥರು ಮೂಕವಿಸ್ಮಿತರಾಗಿ ಮಗುವಿನ ಜ್ಞಾನ ಇನ್ನಷ್ಟು ವೃದ್ಧಿಯಾಗಲೆಂದು ಶುಭ ಹಾರೈಸುತ್ತಿದ್ದಾರೆ.
PublicNext
10/09/2022 01:27 pm