ನರಗುಂದ ಪಟ್ಟಣದ ವಿವಿಧ ಶಾಲೆಗಳ ಸ್ವಚ್ಚತಾ ಕಾರ್ಯ ಹಾಗೂ ಪಟ್ಟಣದ ಬೀದಿಗಳಲ್ಲಿ ಗಿಡಗಳನ್ನು ನೆಟ್ಟು ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನಲೆ ನರಗುಂದ ಪಟ್ಟಣದ ಪರಿಸರ ಪ್ರೇಮಿ ಜಗದೀಶ್ ಗೊಂಡಬಾಳ ಅವರಿಗೆ ಸನ್ಮಾನ ಮಾಡಲಾಯಿತು.
ಇಂದು ಮಾನ್ಯ ಆರ್.ಎಸ್ ಬುರುಡಿ. ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಗದಗ್ ರವರು ಬಿ ಆರ್ ಸಿ ಕಚೇರಿ ನರಗುಂದರಲ್ಲಿ ಪರಿಸರ ಪ್ರೇಮಿ ಜಗದೀಶ್ ಗೊಂಡಬಾಳ ರವರಿಗೆ ಶಾಲಾ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆ ಕಾರ್ಯಕ್ಕಾಗಿ ಅಭಿಮಾನದಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶ್ರೀ ಜಿ.ಎಲ್. ಬಾರಟಕ್ಕಿ ಪ್ರಾಚಾರ್ಯರು ಡಯಟ್ ಗದಗ. ಶ್ರೀ ಜಿ.ವಾಯ್.ಹೂಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ನರಗುಂದ, ಶ್ರೀಮತಿ ಗಾಯತ್ರಿ ಸಜ್ಜನ ಹಿರಿಯ ಉಪನ್ಯಾಸಕರು ಡಯಟ್ ಗದಗ ಹಾಗೂ ಬಿ.ಆರ್.ಸಿ.ನರಗುಂದ ಸಿಬ್ಬಂದಿ ವರ್ಗದವರು ಹಾಜರಿದ್ದರು.
Kshetra Samachara
04/10/2024 09:19 pm