ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳೆ ಹಾನಿ : ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ

ಗದಗ: ಸುರಿದ ಧಾರಾಕಾರ ಮಳೆಯಿಂದ ಹಾನಿಯಾದ ಹೊಲಗಳಿಗೆ ಕೃಷಿ ಇಲಾಖೆಯ ಗದಗ ತಾಲೂಕ ಸಹಾಯಕ ನಿರ್ದೇಶಕ ರವಿ.ಪಿ, ತೋಟಗಾರಿಕೆ ಇಲಾಖೆಯ ಶೈಲೆಂದ್ರ ಬಿರಾದರ ಅವರು ಬುಧವಾರ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದರು.

ಈ ರೈತ ಸಂಘ ಅಧ್ಯಕ್ಷ ಬಸವರಾಜ ಕರಿಗಾರ ಮಾತನಾಡಿ, ಮಳೆ ತೀವ್ರತೆಯಿಂದ ಬೆಳೆ ಹಾನಿ ಅಷ್ಟೇ ಅಲ್ಲದೇ ಹೊಲಗಳ ಬದುವು, ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ, ಅದಕ್ಕೂ ಪರಿಹಾರ ಒದಗಿಸಬೇಕು, ಬೆಳೆ ಹಾನಿಯಿಂದ ಸಣ್ಣ ಮತ್ತು ಮಾಧ್ಯಮ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ತಕ್ಷಣವೆ ನೆರವು ಒದಗಿಸಲು ಕ್ರಮ ವಹಿಸಬೇಕು. ಎಂದು ಮನವಿ ಮಾಡಿದರು.

ನಂತರ ಶೈಲೆಂದ್ರ ಬಿರಾದರ ಮಾತನಾಡಿ, ಗದಗ ತಾಲೂಕಿನಲ್ಲಿ ಹೂ,ಹಣ್ಣು,ತರಕಾರಿ,ಉಳ್ಳಾಗಟ್ಟಿ ಮೆಣಸಿನಕಾಯಿ ಸೇರಿದಂತೆ 14058 ಹೆಕ್ಟರ್ ಭೂ ಪ್ರದೇಶದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಬೆಳೆಗಳ ದೃಢಿಕರಣವಲ್ಲದ ರೈತರು ಹೊಲದ ಪಹಣಿ,ಆಧಾರ ಕಾರ್ಡ,ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿಗಳನ್ನ ತೋಟಗಾರಿಕೆ ಕಚೇರಿಗೆ ಸಲ್ಲಿಸಬೇಕು. ಎಂದು ತಿಳಿಸಿದರು.

ನಂತರ ಕೃಷಿ ಅಧಿಕಾರಿ ರವಿ ಮಾತನಾಡಿ, ಗದಗ ತಾಲೂಕಿನಲ್ಲಿ ಒಟ್ಟು 38150 ಹೆಕ್ಟರ್ ಭೂ ಪ್ರದೇಶದಲ್ಲಿನ ಗೋವಿನ ಜೋಳ, ಹತ್ತಿ, ಶೇಂಗಾ ಸೇರಿದಂತೆ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ. ರೈತರು ಸಂಬಂಧಿಸಿದ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿಕೊಡಬೇಕು. ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿ ಸಹಾಯಕ ಅಧಿಕಾರಿ ಎಫ್.ಸಿ.ಗುರಿಕಾರ,ಸಿ.ಎಲ್.ಕಟ್ಟಿಮನಿ,ಕಾಸೀಂ ಹಾದಿಮನಿ, ರೈತ ಸಂಘದ ದೇವರಾಜ ಸಂಗನಪೇಟಿ,ಪ್ರಭು ಸುಂಕದ ಮೊದಲಾದವರು.

Edited By : PublicNext Desk
Kshetra Samachara

Kshetra Samachara

10/09/2022 05:23 pm

Cinque Terre

5.44 K

Cinque Terre

0