ಸ್ಯಾಂಡಲ್‌ವುಡ್‌ನ 'ಕನಸಿನ ರಾಣಿ' ಅಂತಲೇ ಫೇಮಸ್ ಆದವರು ನಟಿ ಮಾಲಾಶ್ರೀ. 90ರ ದಶಕದಲ್ಲಿ ಅಕ್ಷರಶಃ ಚಿತ್ರರಂಗವನ್ನೇ ಆಳಿದ 'ಲೇಡಿ ಸೂಪರ್ ಸ್ಟಾರ್' ಅವರು. ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಾಲಾಶ್ರೀ ಚಿತ್ರರಂಗದಲ್ಲಿ 43 ವರ್ಷ ಪೂರೈಸಿದ್ದಾರೆ. ಈಗಲೂ ಅವರಿಗೆ ಸಖತ್ ಬೇಡಿಕೆ ಇದೆ. ಇದೀಗ ಅವರ ಪುತ್ರಿ ರಾಧನಾ ರಾಮ್ ಕೂಡ ಸ್ಯಾಂಡಲ್‌ವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಅವರ ರಾಕ್‌ಲೈನ್ ಪ್ರೊಡಕ್ಷನ್ಸ್‌ನ ಬಿಗ್ ಬಜೆಟ್ ಚಿತ್ರವೊಂದಕ್ಕೆ ರಾಧನಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಿನಿಮಾಗೆ ಮುಹೂರ್ತ ಕೂಡ ನೆರವೇರಿದೆ.
ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ರಾಮು ಅವರ ಸಾಧನೆ ಕೊಡುಗೆ ಅಪಾರ. ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಲ್ಲೇ ಬಂದವರು. ಇದೀಗ ಈ ಕುಟುಂಬದಿಂದ ಜ್ಯೂ.ಮಾಲಾಶ್ರೀ ರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರದ ರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
PublicNext
06/08/2022 07:23 pm