ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚುಟುಚುಟು ಬೆಡಗಿ ಆಶಿಕಾ ಈಗ "ಗತವೈಭವ"ದ ದೇವಕನ್ಯೆ!

ಬೆಂಗಳೂರು:ಕನ್ನಡದ ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ "ಗತವೈಭವ" ಚಿತ್ರಕ್ಕೆ ಕೊನೆಗೂ ನಾಯಕಿ ಸಿಕ್ಕಾಗಿದೆ. ಈ ನಾಯಕಿ ಪರಿಚಯವೂ ಸೂಪರ್ ಆಗಿಯೇ ಇದೆ.ನಾಯಕಿ ಆಯ್ಕೆಯ ಸಂದರ್ಭವನ್ನೆ ಟೀಸರ್ ಮಾಡಿ ಡೈರೆಕ್ಟರ್ ಸಿಂಪಲ್ ಸುನಿ ಈಗ ರಿಲೀಸ್ ಮಾಡಿದ್ದಾರೆ.

ಹೌದು. ಗತವೈಭವ ಚಿತ್ರಕ್ಕೆ ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಆಯ್ಕೆ ಆಗಿದ್ದಾರೆ. ದೇವಕನ್ಯೆ ಪಾತ್ರದಲ್ಲಿಯೇ ಆಶಿಕಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಪುತ್ರ ದುಷ್ಯಂತ್ ಈ ಚಿತ್ರದ ಮೂಲಕ ನಾಯಕರಾಗಿಯೇ ಕನ್ನಡ ಇಂಡಸ್ಟ್ರೀಗೆ ಕಾಲಿಡುತ್ತಿದ್ದಾರೆ. ಸದ್ಯಕ್ಕೆ ನಾಯಕಿಯ ಪರಿಚಯದ ವೀಡಿಯೋ ಗಮನ ಸೆಳೆಯುತ್ತಿದೆ.

Edited By :
PublicNext

PublicNext

04/08/2022 05:35 pm

Cinque Terre

93.31 K

Cinque Terre

0