This is a modal window.
Beginning of dialog window. Escape will cancel and close the window.
End of dialog window.
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಹಿಂದೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕನ್ನಡವನ್ನು ತಪ್ಪಾಗಿ ಉಚ್ಛರಿಸಿದ ನಿರೂಪಕಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.
'ವಿಕ್ರಾಂತ್ ರೋಣ' ಚಿತ್ರದ ಪ್ರಚಾರಕ್ಕಾಗಿ ಹೊರ ರಾಜ್ಯಗಳಿಗೆ ಸುದೀಪ್ ಪ್ರಯಾಣ ಬೆಳೆಸಿ ಸಂದರ್ಶನ ನೀಡಿದ್ದಾರೆ. ಸಿನಿಮಾ ರಿಲೀಸ್ ಆದಮೇಲೂ ಹಲವಾರು ಸಂದರ್ಶನಗಳಲ್ಲಿ ಕಿಚ್ಚ ಸುದೀಪ್ ಬ್ಯೂಸಿ ಇದ್ದಾರೆ. ಈ ಮಧ್ಯೆ ಕನ್ನಡವನ್ನು ತಪ್ಪಾಗಿ ಉಚ್ಛರಿಸಿದ ನಿರೂಪಕಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಹಿಂದೆ ವಿಕ್ರಾಂತ್ ರೋಣ ಪ್ರಚಾರದ ವೇಳೆ ಕಿಚ್ಚ ಸುದೀಪ್ ಹಲವರಿಗೆ ಇದೇ ವಿಚಾರವಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಹಿಂದಿ ನಿರೂಪಕಿಯೊಬ್ಬರಿಗೆ ಕನ್ನಡ ಪಾಠ ಮಾಡಿದ್ದಾರೆ ಕಿಚ್ಚ ಸುದೀಪ್.
ಕನ್ನಡವನ್ನು ತಪ್ಪಾಗಿ ಪದಬಳಕೆ ಮಾಡಿದ ಹಲವರಿಗೆ ಕಿಚ್ಚ ಸುದೀಪ್, ಮುಲಾಜಿಲ್ಲದೆ ಸಾರ್ವಜನಿಕವಾಗಿ ಕನ್ನಡ್ ಅಲ್ಲ ಕನ್ನಡ ಎಂದು ಹೇಳಿಕೊಟ್ಟಿದ್ದರು. ಅಂತೆಯೇ ಈಗಲೂ ಕೂಡ ಕನ್ನಡ ಎಂದು ಸ್ಪಷ್ಟವಾಗಿ ಉಚ್ಛರಿಸುವುದನ್ನು ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾರ ಮೊಬೈಲ್ ವಾಟ್ಸ್ಆ್ಯಪ್ ಸ್ಟೇಟಸ್ ನೋಡಿದರೂ ಇದೇ ವಿಡಿಯೋ ರಾರಾಜಿಸುತ್ತಿದೆ. ಕನ್ನಡ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಇರುವ ಗೌರವ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
PublicNext
03/08/2022 11:24 am