ಬೆಂಗಳೂರು:ಪ್ರೇಮ ಬರಹ ಚಿತ್ರದ ನಾಯಕ ಚಂದನ್ ಮತ್ತು ಹೈದ್ರಾಬಾದ್‌ನ ಸಾವಿತ್ರಮ್ಮಗಾರು ಅಬ್ಬಾಯಿ ಸೀರಿಯಲ್ ಟೆಕ್ನಿಷನ್‌ಮಧ್ಯ ಜಟಾಪಟಿ ಆಗಿದೆ. ಹೈದ್ರಾಬಾದ್ ಟೆಕ್ನಿಷನ್‌ಗಳೆಲ್ಲ ಸೇರಿ ಚಂದನ್ ತರಾಟೆಗೂ ತೆಗೆದುಕೊಂಡಿದ್ದಾರೆ. ಆ ಕ್ಷಣದ ಒಂದು ವೀಡಿಯೋ ಈಗ ವೈರಲ್ ಆಗಿದೆ. ಆದರೆ, ಅಸಲಿಗೆ ಅಲ್ಲಿ ಆಗಿದ್ದೇನು ? ಈ ಸತ್ಯವನ್ನ ಫೋನ್ ಮೂಲಕ
ಪಬ್ಲಿಕ್ ನೆಕ್ಸ್ಟ್ ಜತೆ ಹಂಚಿಕೊಂಡಿದ್ದಾರೆ ನಾಯಕ ನಟ ಚಂದನ್.
ನಾನು ಯಾರಿಗೂ ಹೊಡೆದಿಲ್ಲ. ಅಂದು ನಾನು ಸುಸ್ತಾಗಿದ್ದೆ. ಅಮ್ಮನಿಗೆ ಹುಷಾರ್ ಬೇರೆ ಇರಲಿಲ್ಲ. ಕೊಂಚ ಟೆನ್ಷನ್ ಕೂಡ ಇತ್ತು. ಅದೇ ಬೇಸರದಲ್ಲಿಯೇ ಸೆಟ್ ನಲ್ಲಿ ಒಂದೈದು ನಿಮಿಷ ಮಲಗಿಕೊಂಡಿದ್ದೇ. ಆಗಲೇ ಡೈರೆಕ್ಷನ್ ವಿಭಾಗದ ಸಹಾಯಕ ಬಂದು ಕರೆದ. ಐದು ನಿಮಿಷ ಕಣೋ ಅಂತಲೇ ಹೇಳಿದೆ. ಮತ್ತೆ ಮತ್ತೆ ಬಂದು ಇರಿಟೇಟ್ ಮಾಡಿದ. ಅಷ್ಟೇ ನಾನು ಅವನಿಗೆ ಹೊಡೆಯಲಿಲ್ಲ. ಕೊಂಚ ತಳ್ಳಿದೆ ಅಷ್ಟೆ.
ಸಹಾಯಕ ನನ್ನ ಜೊತೆಗೆ ಚೆನ್ನಾಗಿಯೇ ಇದ್ದೋನು. ಚೆನ್ನಾಗಿಯೇ ಮಾತನಾಡುತ್ತಿದ್ದ. ಆದರೆ, ಅಂದಿನ ಈ ಘಟನೆಯನ್ನ ಹೊರಗಡೆ ಹೋಗಿ ಅದೇನ್ ಹೇಳಿದನೋ ಏನೋ. ಡೈರೆಕ್ಷನ್ ಅಸೋಷಿಯೇಷನ್‌ನಿಂದ ಹೆಚ್ಚು ಕಡಿಮೆ ಐವತ್ತು ಜನ ಬಂದೇ ಬಿಟ್ಟರು. ನಾನೊಬ್ಬನೇ ಅಲ್ಲಿ ಆಗ. ಅಲ್ಲಿಯ ಯಾರೊಬ್ಬ ಕಲಾವಿದರು ಸಹಾಯಕ್ಕೆ ಬರಲೇ ಇಲ್ಲ. ಅವರೆಲ್ಲ ಸುಮ್ಮನೆ ನಿಂತಿದ್ದರು ಎಂದು ಬೇಸರದಲ್ಲಿಯೇ ಚಂದನ್ ಹೇಳಿಕೊಂಡಿದ್ದಾರೆ.
ಸಹಾಯಕನಿಂದಲೇ ಕಪಾಳ ಮೋಕ್ಷ ಮಾಡಿಸಿಕೊಂಡು ಬೆಂಗಳೂರಿಗೆ ಬಂದಿರೋ ನಟ ಚಂದನ್, ಅಲ್ಲಿಯ ಯಾವುದೇ ರೀತಿ ದೂರು ಕೊಟ್ಟಿಲ್ಲ. ಇಲ್ಲಿಯೂ ಆ ರೀತಿ ಯೋಚನೆನೂ ಇಲ್ಲ. ಈ ಒಂದು ವಿಷಯವನ್ನ ಇಲ್ಲಿಗೆ ಬಿಟ್ಟು ಬಿಡುತ್ತೇನೆ ಎಂದು ಪಬ್ಲಿಕ್ ನೆಕ್ಸ್ಟ್‌ಗೆ ಹೇಳಿಕೊಂಡಿದ್ದಾರೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
01/08/2022 04:15 pm