ಬೆಂಗಳೂರು:ಕನ್ನಡದ ಮೊಗ್ಗಿನ ಮನಸ್ಸು ಚಿತ್ರ ಖ್ಯಾತಿಯ ನಿರ್ದೇಶಕ ಶಶಾಂಕತ್ ಮತ್ತೊಮ್ಮೆ ಹೊಸ ಅಲೆ ಎಬ್ಬಿಸಲು ಬರ್ತಿದ್ದಾರೆ. Love-360 ಹೆಸರಿನ ಚಿತ್ರದ ಮೂಲಕ ಹೊಸದೊಂದು "ಲವ್"ಲೀ ಕಥೆ ಹೇಳೋಕೆ ಬರ್ತಿದ್ದಾರೆ. ಅದಕ್ಕೂ ಮುಂಚೇನೆ ಈ ಚಿತ್ರದ ಜಗವೇ ನೀನು ಹಾಡು ಹಿಟ್ ಆಗಿದೆ. ಕಾಲೇಜ್ ಹುಡುಗ-ಹುಡುಗಿಯರ Love Anthem ಆಗಿ ಬಿಟ್ಟಿದೆ.
ಲವ್-360 ಚಿತ್ರದಲ್ಲಿ ಹೊಸ ಪ್ರತಿಭೆಗಳೇ ಇರೋದು.ಹೊಸ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡೊ ಡೈರೆಕ್ಟರ್ ಶಶಾಂಕ್ ಈ ಮೂಲಕ ಹೊಸ ರೀತಿಯ ಲವ್ ಸ್ಟೋರಿ ಹೇಳ್ತಿದ್ದಾರೆ. ಅಂದ್ಗಾಗೆ ಈ ಚಿತ್ರದಲ್ಲಿ ಹೊಸಬ ಪ್ರವೀಣ್ ಮತ್ತು ಯುವ ನಟಿ ರಚನಾ ಇಂದ್ರೆ ಅಭಿನಯಿಸಿದ್ದಾರೆ.
ಇವರ ಮೇಲೆ ಚಿತ್ರಿಸಿದ ಜಗವೇ ನೀನು ಹಾಡು ಹಿಟ್ ಆಗಿದೆ. ಡೈರೆಕ್ಟರ್ ಶಶಾಂಕ್ ಬರೆದಿರೋ ಈ ಹಾಡು ಸೂಪರ್ ಆಗಿಯೇ ಬಂದಿದೆ. ಅರ್ಜುನ್ ಜನ್ಯ ಸಂಗೀತದ ಈ ಗೀತೆಗೆ ಸಿಂಗ್ ಸಿದ್ದ ಶ್ರೀರಾಮ್ ಜೀವ ತುಂಬಿದ್ದಾರೆ. ಇದೇ ಹಾಡು ಈಗ ಕಾಲೇಜು ಹುಡುಗ ಹುಡ್ಗಿಯರ Love Anthem ಆಗಿ ಬಿಟ್ಟಿದೆ. ಇನ್ನು ಚಿತ್ರ ಇದೇ 19ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.
PublicNext
29/07/2022 09:00 am