ಮುಂಬೈ: ಬಾಲಿವುಡ್ ನಾಯಕ ನಟ ರಣಬೀರ್ ಕಪೂರ್ ತಮ್ಮ ಮನದಾಳದ ಮಾತು ಹೇಳಿಕೊಂಡಿದ್ದಾರೆ. ಕಳೆದ ಕೆಲವೇ ತಿಂಗಳ ಹಿಂದೆ ಆಲಿಯಾ ಭಟ್ ಮದ್ವೆ ಆಗಿರೋ ರಣಬೀರ್ ಈಗ ಅಪ್ಪ ಆಗ್ತಿದ್ದಾರೆ. ಈ ಖುಷಿಯಲ್ಲಿಯೇ ತಮ್ಮ ಮನಸ್ಸಿನ ಆಸೆಯನ್ನೂ ಹೇಳಿಕೊಂಡಿದ್ದಾರೆ.
ಅಲಿಯಾ ಭಟ್ ಪ್ರಗ್ನೆಂಟ್ ಆಗಿರೋ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅದರಂತೆ ಫುಲ್ ಖುಷಿಯಾಗಿರೋ ರಣಬೀರ್ ಕಪೂರ್ ತಮಗೆ ಗಂಡು ಮಗು ಬೇಡ. ಹೆಣ್ಣು ಮಗುನೇ ಬೇಕು ಅಂತಲೇ ಹೇಳಿಕೊಂಡಿದ್ದಾರೆ.
ಹೆಣ್ಣು ಮಗು ಬೇಕು ಅಂತಲೇ ಮನದಾಸೆ ಹೇಳಿಕೊಂಡಿರೋ ರಣಬೀರ್ ಕಪೂರ್ ಮಕ್ಕಳನ್ನ ಹೇಗೆ ನೋಡಿಕೊಳ್ಳಬೇಕು ಅನ್ನೋದನ್ನ ಕೂಡ ರಣಬೀರ್ ಕಲಿಯುತ್ತಿದ್ದಾರೆ. ಕಲಿಕೆಯ ಆ ವೀಡಿಯೋ ಕೂಡ ಈಗ ವೈರಲ್ ಆಗಿದೆ.
PublicNext
13/07/2022 09:42 am