ಬೆಂಗಳೂರು: ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ತಮ್ಮ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಮೇಕಿಂಗ್ ರಿಲೀಸ್ ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿಯೇ ಈ ವೀಡಿಯೋವನ್ನ ಹಂಚಿಕೊಂಡು ಟ್ರೈಲರ್ ರಿಲೀಸ್ ಮಾಹಿತಿ ನೀಡಿದ್ದಾರೆ.
ಜೂನ್-23 ರಂದು ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದ್ದು, ಅದರ ಬಗ್ಗೇನೆ ಈಗ ಸುದೀಪ್ ಶೇರ್ ಮಾಡಿರೋ ವೀಡಿಯೋ ಹೇಳುತ್ತಿದೆ.
ಚಿತ್ರದ ಟ್ರೈಲರ್ ರಿಲೀಸ್ ಅನ್ನ ಕೂಡ ಸಿನಿಮಾ ತಂಡ ಸಖತ್ ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿಯೇ ಟ್ರೈಲರ್ ರಿಲೀಸ್ ಟೀಸರ್‌ನಲ್ಲಿಯೇ ಮೇಕಿಂಗ್ ವೀಡಿಯೋ ಕೂಡ ಬಿಡ್ತಾಯಿದೆ. ಇದು ಒಂದು ರೀತಿ ವಿಶೇಷವೇ ಆಗಿದೆ.
PublicNext
21/06/2022 03:46 pm