ಬೆಂಗಳೂರು:ಕನ್ನಡದ ನಟಿ ಕಾವ್ಯ ಶಾ ತಮ್ಮ ಬಹು ದಿನಗಳ ಗೆಳೆಯ ನಿರ್ಮಾಪಕ ವರುಣ್ ಗೌಡರನ್ನ ಜೂನ್-10 ಮದುವೆ ಆಗಿದ್ದಾರೆ. ತುಂಬಾ ಸಾಂಪ್ರದಾಯಿಕವಾಗಿಯೇ ನೆರವೇರಿದ ಈ ಮದುವೆಗೆ ಕನ್ನಡ ಇಂಡಸ್ಟ್ರೀಯ ಬಹುತೇಕ ಕಲಾವಿದರೂ ಸಾಕ್ಷಿ ಆಗಿದ್ದರು.
ವರುಣ್ ಹಾಗೂ ಕಾವ್ಯಾ ಶಾ ಮದುವೆಯ ಕ್ಷಣಗಳು ಅಷ್ಟೇ ಅದ್ಭುತವಾಗಿಯೇ ಇದ್ದವು. ಆ ಕ್ಷಣದ ವೀಡಿಯೋಗಳನ್ನ ಸ್ವತಃ ವರುಣ್ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ.
ಚಿತ್ರರಂಗದ ಗಣ್ಯರು ಆಪ್ತರು ಹಾಗೂ ಸ್ನೇಹಿತರು ವರುಣ್ ಮದುವೆಗೆ ಹಾಜರಾಗಿದ್ದರು. ನವ ಜೋಡಿಗೆ ಹರೆಸಿ ಹಾರೈಸಿದರು. ಕಳೆದ ತಿಂಗಳಂದು ಈ ಜೋಡಿಯ ಮದುವೆ ಫಿಕ್ಸ್ ಆಗಿತ್ತು. ಆದರೆ, ವರುಣ್ ತಂದೆ ಸಡನ್ ಆಗಿಯೇ ನಿಧನರಾದರು. ಆ ಕಾರಣಕ್ಕೇನೆ ಮದುವೆ ಮೊನ್ನೆ ನಡೆದಿದೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
18/06/2022 03:32 pm