ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಮತ್ತೆ ಒಂದಾಗುತ್ತಿದ್ದಾರೆ. ರಾಬರ್ಟ್ ಚಿತ್ರ ಬಳಿಕ ಇಬ್ಬರ ನಡುವೆ ಭಾರೀ ಬಿರುಕು ಮೂಡಿತ್ತು. ಆದರೆ, ಈಗ ಇವರು "ಸಿಂಧೂರ ಲಕ್ಷ್ಮಣ" ಚಿತ್ರಕ್ಕಾಗಿಯೇ ಒಂದಾಗುತ್ತಿದ್ದಾರೆ.
ರಾಬರ್ಟ್ ಸಮಯದಲ್ಲಿಯೇ ಸಿಂಧೂರು ಲಕ್ಷ್ಮಣ ಚಿತ್ರದ ಮಾತು ಕೇಳಿ ಬಂದಿತ್ತು. ಇನ್ನೇನು ಈ ಸಿನಿಮಾ ಶುರು ಆಗಿಯೇ ಬಿಡುತ್ತದೆ ಅನ್ನೋ ವಿಷಯವೂ ಭಾರೀ ವೈರಲ್ ಆಗಿತ್ತು. ಆದರೆ, ದರ್ಶನ್ ಮತ್ತು ಉಮಾಪತಿ ವೈಮನಸ್ಸಿನಿಂದಲೇ ಈ ಚಿತ್ರದ ಪ್ರೋಜೆಕ್ಟ್ ಬಗ್ಗೆ ಮಾತೇ ಕೇಳಿರಲಿಲ್ಲ.
ಆದರೆ, ಈಗ ಸಿಂಧೂರ ಲಕ್ಷ್ಮಣ ಚಿತ್ರದ ಮೂಲಕ ಇವರು ಒಂದಾಗುತ್ತಿದ್ದಾರೆ.ಈಗಾಗಲೇ ಈ ಬಗೆಗಿನ ಸಣ್ಣ ಸೂಚನೆ ಕೂಡ ಸಿಕ್ಕಾಗಿದೆ.ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.
PublicNext
18/06/2022 02:10 pm