ವಜ್ರಗಿರಿ ಸದ್ಯ ಜೇಮ್ಸ್ ಚಿತ್ರದಲ್ಲಿ ವಿಲನ್ ರೋಲ್ ನಲ್ಲಿ ಮಿಂಚಿದ್ದಾರೆ. ಶಿವಣ್ಣ ಜತೆ ಭಜರಂಗಿ2 ಮೂಲಕ ಸುದ್ದಿಯಾಗಿದ್ದ ವಜ್ರಗಿರಿ ಪುನೀತ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ನಟಿಸಿದ್ದು ಸೌಭಾಗ್ಯ ಎಂದು ಖುಷಿ ಹಂಚಿಕೊಂಡಿದ್ದಾರೆ.
ಸ್ಕೂಲ್ ನಲ್ಲಿ ತಾನು ಓದುತ್ತಿದ್ದಾಗ ವಜ್ರಮುನಿ ಅತಿಥಿಯಾಗಿ ಬಂದಿದ್ದರು, ಆಗ ತನಗೆ ಬಹುಮಾನ ಕೊಟ್ಟು ಆಶೀರ್ವಾದ ಮಾಡಿದ್ರು. ಹಾಗಾಗಿ ನಾನು ವಿಲನ್ ಆಗಿ ಸೌಂಡ್ ಮಾಡ್ತಿದ್ದೀನಿ ಎಂದಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ ವಜ್ರಗಿರಿ ಮಾತನಾಡಿದ್ದಾರೆ..
PublicNext
24/03/2022 04:49 pm