ದಾವಣಗೆರೆ: ಪವರ್ ಸ್ಟಾರ್, ಕರುನಾಡ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಇಂದು. ಇದರ ಅಂಗವಾಗಿ ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್‌ನ ಈಜುಕೊಳ ಪಕ್ಕದ ಉದ್ಯಾನದಲ್ಲಿ ಅಪ್ಪು ಕಂಚಿನ ಪ್ರತಿಮೆ ಅನಾವರಣಗೊಳಿಸಲಾಯಿತು.
ಅಖಿಲ ಭಾರತ ವೀರಶೈವ ಸಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ವರನಟ ಡಾ. ರಾಜಕುಮಾರ್ ಕುಟುಂಬಕ್ಕೆ ಮೊದಲಿನಿಂದಲೂ ನಂಟು. ಪುನೀತ್ ರಾಜಕುಮಾರ್ ಜೊತೆಗೂ ಶಾಮನೂರು ಶಿವಶಂಕರಪ್ಪರಿಗೆ ಮೊದಲಿನಿಂದಲೂ ಒಡನಾಟ ಇತ್ತು. ಪುಟ್ಟ ಮಗುವಿದ್ದಾಗಲಿಂದಲೂ ನೋಡಿದ್ದರು. ಇನ್ನು ಪುನೀತ್ ಅಂದ್ರೆ ಶಾಮನೂರು ಶಿವಶಂಕರಪ್ಪ ಅವರಿಗೆ ಅಚ್ಚುಮೆಚ್ಚು. ಹಾಗಾಗಿ ಅಪ್ಪು ಬಗ್ಗೆ ವಿಶೇಷ ಅಭಿಮಾನ ಅವರಿಗೆ.
ಎಂಸಿಸಿ ಬಿ ಬ್ಲಾಕ್‌ನಲ್ಲಿಯೇ ಶಾಮನೂರು ಶಿವಶಂಕರಪ್ಪರ ನಿವಾಸ ಇದೆ. ಇದೇ ವಾರ್ಡ್ ನಲ್ಲಿ ಬರುವ ಈಜುಕೊಳ ಪಕ್ಕದಲ್ಲಿನ ಪಾರ್ಕ್‌ನಲ್ಲಿ " ಪುನೀತ ಆನಂದಗೂಡು'' ಎಂಬ ಹೆಸರನ್ನಿಟ್ಟು ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿದೆ. ಈ ಪ್ರತಿಮೆಯನ್ನು ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ಅನಾವರಣಗೊಳಿಸಿದರು.
ಪುನೀತ್ ರಾಜಕುಮಾರ್ ಅವರ ರಾಜಕುಮಾರ ಸಿನಿಮಾದಲ್ಲಿನ ಪಾರಿವಾಳಕುಳಿತ ಫೋಟೋದಲ್ಲಿರುವಂತೆ ನಿರ್ಮಾಣ ಮಾಡಲಾಗಿದೆ. ಈ ಪುತ್ಥಳಿ ನೋಡ್ತಿದ್ದರೆ ನೋಡುತ್ತಲೇ ಇರಬೇಕು ಎನಿಸುವಂತಿದೆ. ಇನ್ನು ಈ ಪ್ರತಿಮೆ ಎದುರು ಅಪ್ಪು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಹಿರಿಯರೂ ಸಹ ಹಿಂದೆ ಬೀಳಲಿಲ್ಲ.
PublicNext
17/03/2022 09:10 pm