'ನೀರ್ ದೋೆಸೆ' ಸಿನಿಮಾ ಬಳಿಕ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್‌ನಲ್ಲಿ 'ತೋತಾಪುರಿ' ಸಿನಿಮಾ ಬರ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ತೋತಾಪುರಿ ಸಿನಿಮಾ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಇದಕ್ಕೂ ಮೊದಲು ಸದ್ಯ ಸಿನಿಮಾದಿಂದ ಟೀಸರ್ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ.
ಚಿತ್ರದ ಪ್ರಚಾರ ಕಾರ್ಯ ಪ್ರಾರಂಭ ಮಾಡಿರುವ ಜಗ್ಗೇಶ್ ಮತ್ತು ತಂಡ ವಿಭಿನ್ನವಾಗಿ ಪ್ರಮೋಷನ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಸದ್ಯ ತೋತಾಪುರಿ ಚಿತ್ರದ ಟೀಸರ್ ಬಿಡುಗಡೆಗೂ ಮೊದಲು ಚಿತ್ರಕ್ಕೆ ಮುನ್ನುಡಿ ಬರೆದಿರುವ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಅವರ ಪುಟ್ಟ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
PublicNext
27/08/2021 06:00 pm