ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ ಅಂತಿಮ ವಾರ ಮನೆ ಕಳೆಕಟ್ಟಿದ್ದು, ಸದ್ಯ ದೊಡ್ಮನೆಯಲ್ಲಿ ಉಳಿದಿರುವ ಆರು ಸ್ಪರ್ಧಿಗಳ ಆಸೆಯನ್ನು ಪೂರೈಸಲಾಗುತ್ತಿದೆ.
ಈ ಹಿಂದೆ ಅರವಿಂದ್ ಕೆ.ಪಿ ಅವರು ಬಿಗ್ ಬಾಸ್ ವೇದಿಕೆಗೆ ತಾವು ಎಂಟ್ರಿ ಕೊಟ್ಟ ಬೈಕ್ ಗಾರ್ಡನ್ ಏರಿಯಾಗೆ ಬರಬೇಕೆಂದು ಕೇಳಿಕೊಂಡಿದ್ದರು. ಅದನ್ನು ಪೂರೈಸಿದ ಬಿಗ್ ಬಾಸ್ ಅರವಿಂದ ಅವರಿಗೆ ಖುಷಿ ನೀಡಿದರು. ಈ ಬೆನ್ನಲ್ಲೇ ದಿವ್ಯಾ ಉರುಡುಗ ಆಸೆಯೂ ಈಡೇರಿದೆ.
ಸುದೀಪ್ ಅವರು ಮಾಡಿದ ಅಡುಗೆಯನ್ನು ಮನೆಯ ಸದಸ್ಯರೆಲ್ಲರೂ ಊಟ ಮಾಡಬೇಕು ಎಂದು ದಿವ್ಯಾ ಉರುಡುಗ ಬೇಡಿಕೆ ಇಟ್ಟಿದ್ದರು. ಅದರಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಾವೇ ತಯಾರಿಸಿದ ಅಡುಗೆಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಸಂಬಂಧ ಪ್ರೊಮೋವನ್ನು ಬಿಡುಗಡೆ ಮಾಡಲಾಗಿದೆ.
ಈ ಪ್ರೊಮೋದಲ್ಲಿ ಕಿಚ್ಚ ಸುದೀಪ್, 'ನೀವು ಇಷ್ಟಪಟ್ಟಹಾಗೆ ಅಡುಗೆ ಮಾಡಿ ಕಳುಹಿಸಿದ್ದೇನೆ' ಎಂದು ಧ್ವನಿ ಕೇಳಿಸಿದೆ. ಅಷ್ಟೇ ಅಲ್ಲದೆ, ಪತ್ರ ಕೂಡ ಕಳಿಸಿರುವ ಕಿಚ್ಚ, 'ಡಿಯು ಅವರೆ ಕೇಳಿದ್ರಿ ಊಟ. ಪ್ರೀತಿಯಿಂದ ತಿನ್ನುತ್ತ ಸ್ವಲ್ಪಹೊತ್ತಾದರೂ ಬಿಡಿ ಅರವಿಂದ್ ಮೇಲಿನ ನೋಟ' ಎಂದು ಬರೆದು ಕಳುಹಿಸಿದ್ದಾರೆ. ತಮ್ಮ ಬೇಡಿಕೆ ಪೂರೈಸಿದ ಸುದೀಪ್ ಅವರಿಗೆ ಮನೆಯ ಸದಸ್ಯರೆಲ್ಲರೂ ಧನ್ಯವಾದ ಹೇಳಿದ್ದಾರೆ.
PublicNext
03/08/2021 06:05 pm