ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೃದಯಾಘಾತದಿಂದ ಆರ್.ಜೆ ರಚನಾ ನಿಧನ

ಬೆಂಗಳೂರು: ಅರಳು ಹುರಿದಂತೆ ಪಟಪಟನೇ ಮಾತಾಡುತ್ತಿದ್ದ ರೇಡಿಯೋ ಜಾಕಿ ರಚನಾ ಇನ್ನಿಲ್ಲ‌‌. ದೈಹಿಕ ಫಿಟ್ನೆಸ್ ಬಗ್ಗೆ ಜಾಸ್ತಿ ಕಾಳಜಿ ಹೊಂದಿದ್ದ ರಚನಾ ಅವರ ಅಕಾಲಿಕ ಮತ್ತು ಅನಿರೀಕ್ಷಿತ ಸಾವು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಕೆಲಸದಲ್ಲಿ ಎಷ್ಟು ಜಾಣೆಯೋ ಡಯಟ್ ಹಾಗೂ ವರ್ಕೌಟ್ ವಿಚಾರದಲ್ಲೂ ಅಷ್ಟೇ ಜಾಣೆಯಾಗಿದ್ದರು ಆರ್.ಜೆ ರಚನಾ. ಕೆಲಸ ಬಿಟ್ಟು ಸುಮಾರು ಏಳು ವರ್ಷಗಳಿಂದ ಮನೆಯಲ್ಲೇ ಇದ್ದ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಇಂದು ಮಧ್ಯಾಹ್ನದಿಂದ ಕೇಳಿ ಬರುತ್ತಿದ್ದು ಇದರಿಂದ ಕೇಳುಗ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅವರು ಮಾನಸಿಕ ಖಿನ್ನತೆಯಿಂದಲೂ ಬಳಲುತ್ತಿದ್ದರು ಎಂಬ ಮಾಹಿತಿ ಇದೆ.

91.1 ಎಫ್.ಎಂ ರೇಡಿಯೋ ಸಿಟಿಯಲ್ಲಿ ಆರ್.ಜೆ ಆಗಿ ಕೆಲಸ ಮಾಡಿಕೊಂಡಿದ್ದ ರಚನಾ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಲ್ಲಿ ನಾಯಕ ನಟ ರಕ್ಷಿತ್ ಶೆಟ್ಟಿ ತಂಗಿಯಾಗಿ ಅಭಿನಯಿಸಿದ್ದರು. ಏಳು ವರ್ಷಗಳಿಂದ ಮನೆಯಲ್ಲೇ ಇದ್ದ ಅವರು ಇತ್ತೀಚಿನ ಹಲವು ತಿಂಗಳಲ್ಲಿ ಯಾರನ್ನೂ ಭೇಟಿ ಆಗಿರಲಿಲ್ಲ‌. ಹಾಗೂ ಯಾರೊಂದಿಗೂ ಮಾತನಾಡಿರಲಿಲ್ಲ ಎಂಬ ಮಾಹಿತಿ ಇದೆ.

Edited By : Nagaraj Tulugeri
PublicNext

PublicNext

22/02/2022 03:10 pm

Cinque Terre

61.93 K

Cinque Terre

17