ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯರ ಹಿಂದೆ ಬಿದ್ದು, ಅವರು ಕಾಲ್ ಶೀಟ್ ಕೊಟ್ಟ ಮೇಲೆ ಸಿನಿಮಾ ಮಾಡಲೇಂದು ತುದಿಗಾಲಲ್ಲಿ ನಿಲ್ಲುತ್ತಿದ್ದ ನಿರ್ದೇಶಕ ನಿರ್ಮಾಪಕರಿಗೆ ಇದೀಗ ಅಂತಹ ಗೊಡವೆಗಳೆ ದೂರವಾಗಿ ಹೊಸ ಪ್ರತಿಭೆಗಳ ಮೂಲಕ ವಿಭಿನ್ನ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರ.
ಈಗಾಗಲೇ ಸ್ಯಾಂಡಲವುಡ್ ಅಂಗಳದಲ್ಲಿ ಬಹುಪಾಲು ವಿಸ್ತಿರಿಸಿದ್ದು ಎಲ್ಲೇಡೆ ನಾಯಕ, ನಾಯಕಿ ಪಾತ್ರಗಳಿಗೆ ಹೊಸಬರ ಪರಿಚಯ ಹೆಚ್ಚಾಗಿದೆ. ಕಲೆ ಮೇಲೆ ಅಭಿಮಾನ ತೋರಿ ಬೆಳ್ಳಿ ತೆರೆಯಲ್ಲಿ ಹೊಸದನ್ನು ಪ್ರಯತ್ನಿಸಿ ಅವಕಾಶ ಪಡೆದುಕೊಳ್ಳುವ ನಟಿ ಮನಿಯರು ಹೆಚ್ಚಾಗಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಕಿರುತೆರೆಯಿಂದ ಬಡ್ತಿ ಪಡೆದು ಬೆಳ್ಳಿ ತೆರೆಗೆ ಆಗಮಿಸಿ ಯಶಸ್ಸು ಪಡೆಯುತ್ತಿರುವವರೇ ಹೆಚ್ಚು ಈ ಸಾಲಿನಲ್ಲಿ ಈಗಾಗಲೇ 'ಜೊತೆ ಜೊತೆಯಲಿ' ಧಾರಾವಾಹಿಯ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಜೊತೆ 'ತ್ರಿಬಲ್ ರೈಡಿಂಗ್' ಸಿನಿಮಾಗೆ ಕಾಲಿಟ್ಟರೆ. ಪಾರು ಧಾರಾವಾಹಿಯ ಮೋಕ್ಷಿತಾ ಪೈ, ದುನಿಯಾ ವಿಜಿ ನಿರ್ದೇಶನದ ಸಿನಿಮಾಯೊಂದರಲ್ಲಿ ಹಿರೋಯಿನ್ ಪಾತ್ರ ಗಿಟ್ಟಿಸಿಕೊಂಡಿದ್ದಾರೆ.
ಈ ಸಾಲಿನಲ್ಲಿ ಕೇವಲ ಕಿರು ತೆರೆಯ ಮೇರು ನಟಿಯರಲ್ಲದೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡವರು ಸಖತ್ ಹವಾ ಸೃಷ್ಟಿಸಿದ್ದಾರೆ. ಅವರ ಮಾಡೆಲಿಂಗ್ ಬದುಕಿನ ಜೊತೆಯೇ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಆಶಾ ಭಟ್ ಮಾಡೆಲಿಂಗ್ ಜೊತೆ ಈಗ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.
ಇಂತಹದೆ ಇನ್ನೋರ್ವ ಪ್ರತಿಭೆ ಶರಣ್ಯಾ ಶೆಟ್ಟಿ, ಗಟ್ಟಿಮೇಳ ಸಿರೀಯಲ್ ಜೊತೆ ಇದೀಗ ಹಿರಿತೆರೆಗೆ ಮುಖ ಮಾಡಿದ್ದು, ಮೂರು ಸಿನಿಮಾಗಳ ಅಭಿನಯಕ್ಕೆ ಸಜ್ಜಾಗಿದ್ದಾರೆ. ಇನ್ನೆರೆಡೂ ಸಿನಿಮಾಗಳು ಅನೌನ್ಸ್ ಆಗುವ ಮುನ್ಸೂಚನೆ ಇದೆ.
PublicNext
18/12/2020 01:39 pm