ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನಗೆ ಸಂಬಂಧ ಕಟ್ಟಿದ್ರೆ ಮೆಟ್ಟು ತಗೊಂಡು ಹೊಡಿತೀನಿ”, ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಆವಾಜ್

ಫೈರ್ ಬ್ರ್ಯಾಂಡ್ ಎಂದೇ ಕರಾವಳಿಯಲ್ಲಿ ಫೇಮಸ್ ಆಗಿರುವ ಚೈತ್ರಾ ಕುಂದಾಪುರ 'ಬಿಗ್ ಬಾಸ್‌' ಮನೆಯಲ್ಲಿ ಕಳೆದ ವಾರದ ವೀಕೆಂಡ್ ಸಂಚಿಕೆಯಲ್ಲಿ ಅವಾಚ್ಯ ಪದಬಳಕೆಯ ವಿಚಾರವಾಗಿ ಸುದೀಪ್ ಅವರು ಸರಿಯಾಗಿಯೇ ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಅವರ ಪದಬಳಕೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈ ನಡುವೆ ಚೈತ್ರಾ ಮದುವೆ ಬಗ್ಗೆಯೂ ಚರ್ಚೆ ಆಗಿದೆ. ಸ್ವತಃ ಚೈತ್ರಾ ಆ ಬಗ್ಗೆ ಹೇಳಿಕೊಂಡಿದ್ದಾರೆ.

'ಬಿಗ್ ಬಾಸ್' ಮನೆಯ ಬೆಡ್‌ ರೂಮ್ ಏರಿಯಾದಲ್ಲಿ ಚೈತ್ರಾ ಕುಂದಾಪುರ, ಹಂಸ ಮತ್ತು ಮಾನಸಾ ಇದ್ದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಳ್ಳುವ ಲವ್ ಸ್ಟೋರಿಗಳ ಬಗ್ಗೆ ಚರ್ಚೆ ಶುರುವಾಯಿತು. ಆಗ ಮಾತಿನ ಮಧ್ಯೆ ಚೈತ್ರಾ, "ಮೆಟ್ಟು ತಗೊಂಡು ಹೊಡಿತೀನಿ ನಾನು. ಹೊರಗೆ ಹೋದರೂ ತೊಂದರೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ ಅಂತ ನಾನು ಮೊದಲೇ ಹೇಳಿದ್ದೇನೆ" ಎಂದು ತಿಳಿಸಿದರು. ಹಾಗಾದ್ರೆ ಚೈತ್ರನಿಗೆ ಮದುವೆ ಫಿಕ್ಸ್ ಆಗಿದ್ಯಾ? ನಿಮಗೆ ಏನಾದ್ರು ಗೊತ್ತಿದ್ರೆ ಕಮೆಂಟ್ ಮಾಡಿ

Edited By : Vinayak Patil
PublicNext

PublicNext

22/10/2024 06:28 pm

Cinque Terre

10.58 K

Cinque Terre

2

ಸಂಬಂಧಿತ ಸುದ್ದಿ