ದೆಹಲಿ: 10 ನೇ ತರಗತಿ ಇಂಗ್ಲಿಷ್ ಪರೀಕ್ಷೆ ಪತ್ರಿಕೆಯ ವಿವಾದಿತ ಪ್ಯಾರಾಗ್ರಾಫ್ ಕೈಬಿಟ್ಟ ಸಿಬಿಎಸ್ ಇ, ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಬದಲು ಪೂರ್ಣ ಅಂಕ ನೀಡಲು ನಿರ್ಧಾರ ಮಾಡಿದೆ.
ಹೌದು ಶನಿವಾರ ನಡೆದ 10 ನೇ ತರಗತಿಯ ಇಂಗ್ಲಿಷ್ ಮೊದಲ ಅವಧಿ ಬೋರ್ಡ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಒಂದು ಸೆಟ್ ನಲ್ಲಿ ಈ ಪ್ಯಾರಾಗ್ರಾಫ್ ಕಾಣಿಸಿಕೊಂಡಿದೆ. ಮೂರು-ಪ್ಯಾರಾಗ್ರಾಫ್ ಗಳಲ್ಲಿ ಮಹಿಳೆಯರ ವಿರುದ್ಧ ,ಲಿಂಗ ಅಸಮಾನತೆಯ ಅಂಶಗಳು ಕಾಣಿಸಿದ್ದು ವ್ಯಾಪಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ಯಾರಾಗ್ರಾಫ್ ಕಟ್ ಮಾಡಲಾಗಿದೆ.
ಕಟ್ ಮಾಡಲಾದ ಫ್ಯಾರಾದಲ್ಲಿ "ಮಹಿಳೆಯರಿಗೆ ನೀಡುವ ವಿಮೋಚನೆ (ಸ್ವಾತಂತ್ರ್ಯ) ಮಕ್ಕಳ ಮೇಲಿನ ಪಾಲಕರ ಅಧಿಕಾರ ನಾಶ ಮಾಡುತ್ತದೆ ಎಂಬುದನ್ನು ಜನರು ಗ್ರಹಿಸಿಕೊಳ್ಳಲು ಹಿಂದೆಬಿದ್ದಿದ್ದರು. ಪುರುಷನನ್ನುಆತನ ಸ್ಥಾನದಿಂದ ಕೆಳಗಿಳಿಸುವಲ್ಲಿ ಮಹಿಳೆಯರು ತಮ್ಮನ್ನು ತಾವು ಕಳೆದುಕೊಂಡರು. ಆದರೆ ಮಹಿಳೆಯರು ತಮ್ಮ ಪತಿಯ ಮಾರ್ಗವನ್ನು ಅನುಸರಿಸುವ ಮೂಲಕ ಮಾತ್ರ ಕಿರಿಯರಿಂದ ವಿಧೇಯತೆಯನ್ನು ಗಳಿಸಬಹುದು ಎಂದು ಇದೆ.
PublicNext
13/12/2021 04:55 pm