ಆಗ್ರಾ: ಮಾಡಬಾರದ್ದು ಮಾಡಿದ್ರೆ ಆಗಬಾರದ್ದು ಆಗುತ್ತೆ ಅಂತಾರಲ್ಲ...ಹಾಗಾಗಿದೆ ಈ ಲೇಡಿ ಟೀಚರ್‌ಗಳ ವ್ಯಥೆ.
ಇದು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಅಖ್ನೇರಾ ಬ್ಲಾಕ್‌ನಲ್ಲಿರುವ ಸರ್ಕಾರಿ ಶಾಲೆ. ವಿದ್ಯಾರ್ಥಿಗಳಿಲ್ಲದ ವೇಳೆ ತರಗತಿಯಲ್ಲಿ ಬಾಗಿಲು ಲಾಕ್ ಮಾಡಿಕೊಂಡ ಶಿಕ್ಷಕಿಯರು ಮರಜಾವಾ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ರಶ್ಮಿ ಸಿಸೋಡಿಯಾ, ಜೀವಿಕಾ ಕುಮಾರಿ, ಅಂಜಲಿ ಯಾದವ್, ಸುಮನ್ ಕುಮಾರಿ, ಮತ್ತು ಸುಧಾರಾಣಿ ಎಂಬ ಶಿಕ್ಷಕಿಯರೇ ಈ ಪರಿ ಡ್ಯಾನ್ಸ್ ಮಾಡಿದವರು. ಘಟನೆ ಬಗ್ಗೆ ಇಲಾಖಾ ತನಿಖೆ ನಡೆಸಿದ ಶಿಕ್ಷಣಾಧಿಕಾರಿ ಬ್ರಜರಾಜ್ ಸಿಂಗ್ ಶಾಲಾ ಕೊಠಡಿಯಲ್ಲಿ ಡ್ಯಾನ್ಸ್ ಮಾಡಿದ ಈ ಶಿಕ್ಷಕಿಯರನ್ನು ಸಸ್ಪೆಂಡ್ ಮಾಡಿದ್ದಾರೆ.
PublicNext
27/09/2021 01:59 pm