ಬ್ರಿಟನ್ನಲ್ಲಿ ನಡೆದ ಬಾರ್ ಲಾ ಕ್ವಾಲಿಫಿಕೇಶನ್ ಸಮಾರಂಭದಲ್ಲಿ ಭಾರತೀಯ ಮೂಲದ ಲವಜ್ಯೋತ್ ಸಿಂಗ್ ಸಾಂಪ್ರದಾಯಿಕ ಬಾನಾ ಸಿಖ್ ಉಡುಗೆ ತೊಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ರು. ಸಿಖ್ ಉಡುಗೆಯಲ್ಲಿ ಅರ್ಹತಾ ಪತ್ರ ಪಡೆದ ಲವಜ್ಯೋತ್ ಸಿಂಗ್ ದೃಶ್ಯಗಳು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲವಜ್ಯೋತ್ ಸಿಂಗ್, ತಾನು ನಂಬಿರುವ ನೀತಿಗಳನ್ನು ತನ್ನ ವಕೀಲ ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದರ ಪ್ರತೀಕವಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಅರ್ಹತಾ ಪತ್ರ ಪಡೆಯುತ್ತಿರುವುದಾಗಿ ತಿಳಿಸಿದ್ರು.
PublicNext
08/12/2021 09:50 pm