ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜುಲೈ 30ರಂದು ಬೆಳಗ್ಗೆ ಸಿಇಟಿ ಫಲಿತಾಂಶ

ಬೆಂಗಳೂರು: ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ KCET Results 2022 ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶವು ಶನಿವಾರ ಬೆಳಗ್ಗೆ 10 ಗಂಟೆಗೆ ಪ್ರಕಟಗೊಳ್ಳಲಿದೆ.

ಮಲ್ಲೇಶ್ವರಂ ಕೆಇಎ ಬೋರ್ಡ್ ನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಆಶ್ವಥ್ ನಾರಾಯಣ್ ರವರು ಪ್ರೆಸ್ ಮೀಟ್ ನಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಲಿದ್ದಾರೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET ) ಜೂನ್‌ ತಿಂಗಳಲ್ಲಿ ನಡೆದಿತ್ತು. ಅಂದರೆ, ಜೂನ್‌ ಜೂನ್ 16, 17 ಮತ್ತು 18ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಮತ್ತು ಭವಿಷ್ಯ ತೀರ್ಮಾನಿಸುವಲ್ಲಿ ಪ್ರಮುಖ ಪಾತ್ರವಹಿಸುವ ಸಿಇಟಿ ಫಲಿತಾಂಶ ನಾಳೆ ಹೊರಬೀಳಲಿದ್ದು, ಬಳಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕಾಲೇಜುಗಳಿಗೆ ಸೇರಬಹುದಾಗಿದೆ.

ಒಟ್ಟು 2,16,559 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ kea.kar.nic.in ಭೇಟಿ ನೀಡಬಹುದು. ಇಲ್ಲಿ ಫಲಿತಾಂಶ ಕ್ಲಿಕ್ ಮಾಡಿ ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನೂ ನಮೂದಿಸಿ ಬಳಿಕ ಸಿಇಟಿ ಫಲಿತಾಂಶ ಸ್ಕ್ರೀನ್ ಮೇಲೆ ತೆರೆದುಕೊಳ್ಳಲಿದೆ.

ಸಿಬಿಎಸ್​ಇ ಮತ್ತು ಐಸಿಎಸ್​ಇ ಪಠ್ಯಕ್ರಮದಲ್ಲಿ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಪಡೆದಿರುವ ಅಂಕಗಳನ್ನೂ ಸಿಇಟಿ ರಾಂಕ್‌ನಲ್ಲಿ ಪರಿಗಣಿಸಲಾಗುತ್ತದೆ. ಈಗಾಗಲೇ ಪಿಯುಸಿ ಅಥವಾ ಸಿಬಿಎಸ್‌ಇ ಹನ್ನೆರಡನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಈ ಎಲ್ಲಾ ಅಂಕಗಳ ಆಧಾರದಲ್ಲಿ ಅಂತಿಮ ರಾಂಕ್‌ ಪಟ್ಟಿಯನ್ನು ಸಿದ್ಧಪಡಿಸಿ ನಾಳೆ ಅಂತಿಮ ಫಲಿತಾಂಶ ಪ್ರಕಟಿಸಲಿದೆ.

Edited By : Vijay Kumar
PublicNext

PublicNext

29/07/2022 10:55 pm

Cinque Terre

49.54 K

Cinque Terre

0

ಸಂಬಂಧಿತ ಸುದ್ದಿ