ಬಾಡಿಗೆ ಶಿಕ್ಷಕರ ದಂಧೆ ಹೆಚ್ಚಾಗಿದೆ. ಇವರ ಹಾವಳಿನೂ ಡಬಲ್ ಆಗಿದೆ.ಸರ್ಕಾರದ ಸಂಭಾವನೆ ಪಡೆಯೋ ಶಿಕ್ಷಕರು ಆಯಾ ಶಾಲೆಯಲ್ಲಿ ಇರೋದೇ ಇಲ್ಲ. ಅವರ ಬದಲು ಬಾಡಿಗೆ ಶಿಕ್ಷಕರೆ ಅಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಇದನ್ನ ತಡೆಯಲು ಹೊಸ ಈಗ ಹೊಸ ಐಡಿಯಾ ಮಾಡಲಾಗಿದೆ.
ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಇನ್ಮುಂದೆ ಆಯಾ ಶಿಕ್ಷಕರ ವಿವರ ಮತ್ತು ಪೋಟೋವನ್ನ ಆಯಾ ಶಾಲೆಯಲ್ಲಿ ಪ್ರದರ್ಶಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಒಳ್ಳೆಯ ಸಂಬಳ ಪಡೆಯೋ ಶಿಕ್ಷಕರು ಬಾಡಿಗೆ ಶಿಕ್ಷಕರಿಗೆ ಇಂತಿಷ್ಟು ಅಂತ ಕೊಟ್ಟು,ಪಾಠ ಮಾಡಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚಾಗಿರೋ ಹಿನ್ನೆಲೆಯಲ್ಲಿಯೇ ಸರ್ಕಾರ ಈ ಒಂದು ಕ್ರಮಕ್ಕೆ ಮುಂದಾಗಿದೆ.
PublicNext
14/07/2022 10:08 am