ಬೆಂಗಳೂರು: ಮೊನ್ನೆ ಮೊನ್ನೆ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದೆ. ಈಗ ಪಿಯುಸಿ ಫಲಿತಾಂಶಕ್ಕಾಗಿಯೇ ವಿದ್ಯಾರ್ಥಿಗಳು ಕಾತರದಿಂದಲೇ ಕಾಯುತ್ತಿದ್ದು,ಪದವಿ ಪೂರ್ವ ಶಿಕ್ಷಣ ಇಲಾಖೆ ರಿಸಲ್ಟ್ ಪ್ರಕಟಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನ ಶಿಕ್ಷಣ ಇಲಾಖೆ ಇದೇ ತಿಂಗಳ ನಾಲ್ಕನೆ ವಾರ ಪ್ರಕಟಿಸಲಿದೆ. ಅಧಿಕೃತ ಫಲಿತಾಂಶ ಇಲಾಖೆಯ www.karresult.nic.in ಲಭ್ಯವಾಗಲಿದೆ.
ಏಪ್ರಿಲ್ 22 ರಿಂದ ಮೇ-18 ರವರೆಗೂ ಪರೀಕ್ಷೆ ನಡೆದಿದ್ದವು.6,84,255 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 61808 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
PublicNext
08/06/2022 08:37 pm