ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡನೇ ಬಾರಿಯೂ ಯುಪಿಎಸ್‌ಸಿ ಪಾಸಾದ ಯುವತಿ.!

ಬಿಹಾರ: ಈಗಿನ ಕಾಲದಲ್ಲಿ ಒಂದು ಸರಕಾರಿ ಕೆಲಸ ಸಿಕ್ಕರೆ ಸಾಕಪ್ಪ ಅನ್ನೋ ಸಮಯದಲ್ಲಿ ಇಲ್ಲೋರ್ವ ಯುವತಿ UPSC ಪರೀಕ್ಷೆಯಲ್ಲಿ ಎರಡನೇ ಬಾರಿಯೂ ಪಾಸ್ ಆಗುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.

ಹೌದು. ಇತ್ತೀಚೆಗೆ ಪ್ರಕಟಗೊಂಡ UPSC ಪರೀಕ್ಷಾ ಫಲಿತಾಂಶದಲ್ಲಿ ರ್ಯಾಂಕ್ ಪಡೆದವರು ಅನೇಕ ಜನರಿಗೆ ಸ್ಫೂರ್ತಿ ಆಗಿದ್ದಾರೆ. ಇಂತಹ ಪ್ರೇರಣಾದಾಯಕ ಕತೆಗಳಲ್ಲಿ ದಿವ್ಯಾ ಶಕ್ತಿ ಎಂಬ ಬಿಹಾರದ ಯುವತಿಯ ಕತೆಯು ಸೇರಿದೆ. ಈ ಯುವತಿ ಎರಡನೇ ಬಾರಿಯೂ UPSC ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ.

2019ರಲ್ಲಿ ನಡೆದ ಪರೀಕ್ಷೆಯಲ್ಲಿ 79ನೇ ರ‍್ಯಾಂಕ್ ಗಳಿಸಿ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಆದರೆ ಐಪಿಎಸ್ ಅಧಿಕಾರಿಗಿಂತ ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ಮಹದಾಸೆಯಾಗಿತ್ತು. ಈ ಆಸೆಯನ್ನು ಈಡೇರಿಸಿಕೊಳ್ಳಲೆಂದು ಮತ್ತೆ 2022ರಲ್ಲಿ ಪರೀಕ್ಷೆಗೆ ತನ್ನ ಪೊಲೀಸ್ ತರಬೇತಿ ಜೊತೆ ಜೊತೆಯಲ್ಲೇ ತಯಾರಿ ನಡೆಸಿದ್ದರು. ಈ ಪ್ರಯತ್ನ ಫಲವನ್ನೂ ಕೊಟ್ಟಿತು. ಅಂದರೆ ಈ ಬಾರಿ ಪರೀಕ್ಷೆಗೆ ಹಾಜರಾದ ದಿವ್ಯಾ 58ನೇ ರ‍್ಯಾಂಕ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಲಾ ದಿನಗಳಿಂದಲೂ ದಿವ್ಯಾ ಪ್ರತಿಭಾನ್ವಿತ ವಿದ್ಯಾರ್ಥಿನಿ. ಮುಜಾಫರ್ ನಗರದಲ್ಲಿ ಪ್ರೌಢಶಾಲೆಯನ್ನು ಮುಗಿಸಿ ಡಿಪಿಎಸ್ ಬೊಕಾರೋದಲ್ಲಿ ಇಂಟರ್ ಮೀಡಿಯೆಟ್ ಪಡೆದರು. ನಂತರದಲ್ಲಿ ಬಿಐಟಿಎಸ್ ಪಿಲಾನಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Edited By : Vijay Kumar
PublicNext

PublicNext

01/06/2022 06:09 pm

Cinque Terre

19.61 K

Cinque Terre

0

ಸಂಬಂಧಿತ ಸುದ್ದಿ