ಬೆಂಗಳೂರು: ಡಿಪ್ಲೋಮಾ ಓದುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಶಿಕ್ಷಣ ಪರಿಷತ್ ಗುಡ್ ನ್ಯೂಸ್ ನೀಡಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಕಷ್ಟಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಮುಂಬರುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮಗೆ ಅನುಕೂಲ ಆಗುವ ರೀತಿಯಲ್ಲಿ ಬರೆಯಬಹುದು.
ಈ ಕುರಿತು ಮಾಹಿತಿ ನೀಡಿರುವ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಡಿಪ್ಲೊಮಾ ಕಾಲೇಜಿನಲ್ಲಿ ಪ್ರಮುಖ ನಿರ್ಣಯ ಕೈಗೊಂಡಿದ್ದೇವೆ. ಇನ್ಮುಂದೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕನ್ನಡ-ಇಂಗ್ಲಿಷ್ ಅಥವಾ ಇಂಗ್ಲೀಷ್-ಕನ್ನಡ ಬಳಕೆ ಮಾಡಿ ಮಾಡಿ ಪರೀಕ್ಷೆಯನ್ನು ಬರೆಯಲು ಅವಕಾಶ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಪನ್ಯಾಸಕರು ತರಗತಿಯಲ್ಲಿ ಪಾಠ ಮಾಡುವಾಗ ಅರ್ಧಂಬರ್ಧ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಮಾಡುತ್ತಾರೆ. ಆದರೆ, ಮಕ್ಕಳು ಪರೀಕ್ಷೆ ಬರೆಯುವಾಗ ಇಂಗ್ಲಿಷ್ನಲ್ಲಿ ಬರೆಯಬೇಕಿತ್ತು. ಡಿಪ್ಲೊಮಾ ವಿದ್ಯಾರ್ಥಿಗಳು ಹತ್ತನೇ ಕ್ಲಾಸ್ ಪಾಸ್ ಮಾಡಿಕೊಂಡು ಬಂದಿರುತ್ತಾರೆ. ಅವರಿಗೆ ಇಂಗ್ಲಿಷ್ನಲ್ಲಿ ವಾಖ್ಯ ರಚನೆ ಮಾಡಿ ಬರೆಯೋದು ಕಷ್ಟವಾಗುವುದು ಗಮನಕ್ಕೆ ಬಂದಿದೆ ಎಂದರು.
ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಪಠ್ಯವನ್ನು ಮನನ ಮಾಡಿಕೊಂಡು ಪರೀಕ್ಷೆ ಬರೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಕನ್ನಡ-ಇಂಗ್ಲಿಷ್ ಅಥವಾ ಇಂಗ್ಲಿಷ್-ಕನ್ನಡ ಬಳಕೆ ಮಾಡಿ ಪರೀಕ್ಷೆಯನ್ನು ಬರೆಯಬಹುದು. ಕೆಲ ಟೆಕ್ನಿಕಲ್ ಪದಗಳು ಇಂಗ್ಲಿಷ್ನಲ್ಲಿ ಆಗದೇ ಇದ್ದರೆ ಕನ್ನಡದಲ್ಲಿ ಬರೆಯಬಹುದು. ಉದಾರಹಣೆಗೆ diploma ಎಂಬ ಪದವನ್ನು ಕನ್ನಡದಲ್ಲಾದರೂ ಬರೆಯಬಹುದು, ಇಂಗ್ಲಿಷ್‌ನಲ್ಲಿಯಾದರೂ ಬರೆಯಬಹುದು. ಇಂತಹದೊಂದು ಪ್ರಯೋಗ ಮುಂದಿನ ಸೆಮಿಸ್ಟರ್ನಲ್ಲೇ ಶುರುವಾಗಲಿದೆ ಎಂದು ವಿವರಿಸಿದರು.
PublicNext
04/05/2022 06:00 pm