ಬೆಂಗಳೂರು:ಮೊನ್ನೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಆಗಿವೆ. ಏ.23ರಿಂದ, ಈ ಉತ್ತರ ಪತ್ರಿಕೆಯ ಮೌಲ್ಯಮಾಪನ ಶುರು ಆಗುತ್ತಿದೆ. ಮೇ-03 ರ ಹೊತ್ತಿಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸೋ ಗುರಿ ಹೊಂದಲಾಗಿದೆ.
ಮೌಲ್ಯಮಾಪಕರಿಗೆ 21 ಮತ್ತು 22 ರ ವರೆಗೂ ತರಬೇತಿ ನೀಡಲಾಗುತ್ತಿದ್ದು, ರಾಜ್ಯದ 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ.
64,796 ಶಿಕ್ಷಕರಿಗೆ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.ಆದರೆ, 4 ರಿಂದ 5 ಸಾವಿರ ಶಿಕ್ಷಕರು ಅನಾರೋಗ್ಯದ ಕಾರಣ ನೀಡಿ ಗೈರು ಹಾಜರಾಗಿದ್ದಾರೆ.
ಕೇವಲ 50 ಸಾವಿರ ಶಿಕ್ಷಕರು ಮೌಲ್ಯಮಾಪನಕ್ಕೆ ಹಾಜರಾದರೂ ಸಾಕು. ನಿಗದಿತ ಸಮಯಕ್ಕೆ ಮೌಲ್ಯಮಾನ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.
PublicNext
21/04/2022 10:26 am