ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರೀಕ್ಷಾ ಕೊಠಡಿಗೆ ಎಂಟ್ರಿ ಕೊಟ್ಟ ಹಿಜಾಬ್ ಧಾರಿ ಮೇಲ್ವಿಚಾರಕಿ ಸಸ್ಪಂಡ್!

ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ವಿವಾದ ಬೂದಿ ಮುಚ್ಚಿದ ಕೆಂಡದಂತ್ತಿದೆ. ಇದರ ಮಧ್ಯೆ ಇಂದು ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿವೆ. ಹಿಜಾಬ್ ಧರಿಸಿ ಬರುವವರಿಗೆ ನೋ ಎಂಟ್ರಿ ಎಂದು ಸರ್ಕಾರ ಆದೇಶ ಹೊರಡಿಸಿರುವ ನಡುವೆಯೂ ಪರೀಕ್ಷಾ ಮೇಲ್ವಿಚಾರಕಿಯೊಬ್ಬರು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಬಂದ ಘಟನೆ ರಾಜಾಜಿನಗರದ ಪರೀಕ್ಷಾ ಕೊಠಡಿಯೊಂದರಲ್ಲಿ ನಡೆದಿದೆ.

ಹೌದು ರಾಜಾಜಿನಗರದ ಕೆಟಿಎಸ್ವಿ ಹೈಸ್ಕೂಲ್ ಶಿಕ್ಷಕಿ ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿ ಬಂದಿದ್ದರು. ಈ ವೇಳೆ ಪರೀಕ್ಷಾ ಮೇಲ್ವಿಚಾರಕಿ ಫಾತಿಮಾ ಅವರನ್ನು ಅಮಾನತು ಮಾಡಲಾಗಿದೆ. ಪರೀಕ್ಷಾ ಕೆಲಸದಿಂದ ಮುಖ್ಯ ಅಧೀಕ್ಷಕರು ವಜಾಗೊಳಿಸಿದ್ದಾರೆ.ಇವರ ಜಾಗಕ್ಕೆ ಮತ್ತೋರ್ವ ಪರೀಕ್ಷಾ ಮೇಲ್ವಿಚಾರಕರನ್ನು ನಿಯೋಜನೆ ಮಾಡಿದ್ದಾರೆ. ಹಿಜಾಬ್ ತೆಗಿಯಬೇಕು ಎನ್ನುವ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ. ಶಿಕ್ಷಕರಿಗೆ ಅನ್ವಯಿಸಲ್ಲ ಅಂತ ಅಧೀಕ್ಷಕರ ಜೊತೆ ವಾದ ಶಿಕ್ಷಕಿ ನೂರ್ ಫಾತಿಮಾ ವಾಗ್ವಾದ ನಡೆಸಿದರು.ಹಿಜಾಬ್ ತೆಗೆಯುವಂತೆ ಸೂಚಿಸಿದರು ಶಿಕ್ಷಕಿ ಫಾತಿಮಾ ನಿರಾಕಸಿದ್ದಾರೆ. ಹೀಗಾಗಿ ಪರೀಕ್ಷಾ ಕೆಲಸದಿಂದ ಅಮಾನತುಗೊಳಿಸಲಾಗಿದೆ.

Edited By : Nirmala Aralikatti
PublicNext

PublicNext

28/03/2022 01:03 pm

Cinque Terre

47.78 K

Cinque Terre

30

ಸಂಬಂಧಿತ ಸುದ್ದಿ