ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

SSLC, ದ್ವಿತೀಯ PUC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ಹಾಜರಾತಿ ಇಲ್ಲದೇ ಇದ್ದರೂ ಈ‌ ಬಾರಿ ಎಸ್ಎಸ್ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡುವ ಮಹತ್ವದ ನಿರ್ಧಾರವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ತೆಗೆದುಕೊಂಡಿದೆ.

ರಾಜ್ಯದಲ್ಲಿ ಮಾರ್ಚ್ ಅಂತ್ಯದಿಂದ ಎಸ್ಎಸ್ಎಲ್​ಸಿ ಪರೀಕ್ಷೆ ಹಾಗೂ ಏಪ್ರಿಲ್​ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಶಿಕ್ಷಣ ಕಾಯ್ದೆ 2006ರ ಅಧಿನಿಯಮ ಪ್ರಕಾರ ಹಾಜರಾತಿ ಕಡ್ಡಾಯಗೊಳಿಸಲಾಗಿತ್ತು. ಪ್ರತಿ ವರ್ಷ ಹಾಜರಾತಿ ಕೊರತೆಯಿಂದ ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಗುತ್ತಿರಲಿಲ್ಲ. ಆದ್ರೆ ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಕಡ್ಡಾಯ ಹಾಜರಾತಿ ಕೈಬಿಡಲಾಗಿತ್ತು. ಈ ವರ್ಷವೂ ಕೋವಿಡ್​ ಕಾರಣ ಹಾಜರಾತಿ ನಿಯಮ ಕೈಬಿಡಲಾಗಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ರಾಮಚಂದ್ರನ್ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಶೇ.75 ರಷ್ಟು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಅವಕಾಶ ಇರಲಿಲ್ಲ. ಈ ಬಾರಿ ಹಾಜರಾತಿ ಕಡ್ಡಾಯ ನಿಯಮ ಇಲ್ಲದೇ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಜರಾತಿ ಕೊರತೆ ಇದ್ದರೂ ಪರೀಕ್ಷೆ ಬರೆಯಬೇಕು ಅಂದ್ರೆ ಕೆಲವು ಕಂಡಿಷನ್ಸ್ ಅನ್ವಯಿಸಲಿವೆ. ಕಡ್ಡಾಯವಾಗಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿ ಮಾಡಿರಬೇಕು ಎಂದು ತಿಳಿಸಿದರು.

Edited By : Vijay Kumar
PublicNext

PublicNext

12/03/2022 08:04 pm

Cinque Terre

55.47 K

Cinque Terre

0