ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VTU ದಲ್ಲಿ ದಾಖಲೆ : 16 ಪದಕಗಳೊಂದಿಗೆ ಚಿನ್ನದ ಹುಡುಗಿಯಾದ ಬುಷ್ರಾ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಜ್ಞಾನಸಂಗಮ ಆವರಣದಲ್ಲಿ ವಿಟಿಯು 21ನೇ ಘಟಿಕೋತ್ಸವ ನಡೆಯಿತು. ಈ ವೇಳೆ

ರಾಯಚೂರಿನ ಎಸ್ ಎಲ್ ಎನ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ 16 ಚಿನ್ನದ ಪದಕ ಪಡೆದು ಹುಡುಗಿಯಾಗಿ ಹೊರಹೊಮ್ಮಿದ್ದಾರೆ.

ಇನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪದವಿ ಪ್ರದಾನ ಮಾಡಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇತಿಹಾಸದಲ್ಲೇ 16 ಚಿನ್ನದ ಪದಕ ಪಡೆದ ಮೊದಲ ಯುವತಿ ಇವರಾಗಿದ್ದಾರೆ.

ಈ ಕುರಿತು ಮಾತನಾಡಿದ ಬುಷ್ರಾ, ಇದು ಅವಿಸ್ಮರಣೀಯ ದಿನ. ನಾನು ಕನ್ನಡತಿ ಎಂಬ ಹೆಮ್ಮೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ಆಫ್ ಲೈನ್, ಆನ್ ಲೈನ್ ತರಗತಿಯ ನಡುವೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಸಾಧನೆ ಸುಲಭ ಎಂದಿದ್ದಾರೆ. ಭವಿಷ್ಯದಲ್ಲಿ ಐಎಎಸ್(IAS) ಅಧಿಕಾರಿಯಾಗುವ ಕನಸು ಕಂಡಿರುವ ಇವರು ಕನಸ್ಸು ನನಸಾಗಿ ಎಂದು ಆಶಿಸೋಣ.

Edited By : Nirmala Aralikatti
PublicNext

PublicNext

11/03/2022 01:39 pm

Cinque Terre

216.22 K

Cinque Terre

34

ಸಂಬಂಧಿತ ಸುದ್ದಿ