ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾ- ಉಕ್ರೇನ್ ಸಂಘರ್ಷ: ಶಾಲೆಗಳ ಬಿಸಿಯೂಟಕ್ಕೆ ತಂತು ಸಂಕಷ್ಟ.!

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆರಂಭವಾದ ಬಳಿಕ ಸೂರ್ಯ ಕಾಂತಿ ಎಣ್ಣೆ ಬೆಲೆ ಏರುತ್ತಲೇ ಇದೆ. ಇದರಿಂದಾಗಿ ರಾಜ್ಯದ ಶಾಲೆಗಳಲ್ಲಿ ಜಾರಿಯಾದ ಬಿಸಿಯೂಟ ಯೋಜನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಮಾರ್ಚ್ ಹಾಗೂ ಏಪ್ರಿಲ್ ಅವಧಿಗೆ ಸೂರ್ಯಕಾಂತಿ ಎಣ್ಣೆ ಸರಬರಾಜು ವ್ಯತ್ಯಾಸ ಆಗುವುದರಿಂದ ಅಗತ್ಯ ಪರಿವರ್ತನಾ ವೆಚ್ಚವನ್ನು ಬಳಸಿಕೊಂಡು ಬಿಸಿಯೂಟದಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕೆಂಬ ಸೂಚನೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆದರೆ ಯುದ್ಧದ ಪರಿಣಾಮ ಮಾರುಕಟ್ಟೆಯಲ್ಲಿ ಎರಿಳಿತವಾಗುವ ಸೂರ್ಯಕಾಂತಿ ಎಣ್ಣೆ ದರವನ್ನು ಮುಖ್ಯ ಶಿಕ್ಷಕರೇ ತಮ್ಮ ಜೇಬಿನಿಂದ ಬರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸೂರ್ಯಕಾಂತಿ ಎಣ್ಣೆಯ ದರದಲ್ಲಿ ವ್ಯತ್ಯಾಸ ಆದರೂ ಬಿಸಿಯೂಟ ಯೋಜನೆಗೆ ತೊಡಕಾಗಬಾರದು ಎಂದು ಇದೇ ತಿಂಗಳ 7ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಆದೇಶ ಹೊರಡಿಸಿದ್ದು, ಮುಖ್ಯ ಶಿಕ್ಷಕರ ಜೇಬಿಗೆ ಕತ್ತರಿ ಬಿದ್ದಿದೆ. ಹೆಚ್ಚುವರಿ ಹಣವನ್ನು‌ ಸರ್ಕಾರದಿಂದ ಬಿಡುಗಡೆ ಮಾಡಲು ಸಾಧ್ಯ ವಿಲ್ಲ ಎಂದು ಸರ್ಕಾರ ಪರೋಕ್ಷವಾಗಿ ತಿಳಿಸಿದೆ. ಇದು ಬಿಸಿಯೂಟ ಯೋಜನೆ ಉಸ್ತುವಾರಿ ಪಡೆದ ಮುಖ್ಯ ಶಿಕ್ಷಕರ ಮೇಲೆ ಬರುತ್ತದೆ.

Edited By : Vijay Kumar
PublicNext

PublicNext

09/03/2022 01:28 pm

Cinque Terre

47.3 K

Cinque Terre

0