ನವದೆಹಲಿ: ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಕೋರ್ಸ್‍ಗಾಗಿ ನಡೆಯಬೇಕಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಕೇಂದ್ರ ಸರ್ಕಾರ ಬೆಳಗ್ಗೆ ಮುಂದೂಡಿತ್ತು. ಇದೀಗ ಮುಂದಿನ ಪರೀಕ್ಷಾ ದಿನಾಂಕವನ್ನು ಘೋಷಿಸಿದೆ. ಮೇ. 21ರಂದು ದೇಶಾದ್ಯಂತ ನೀಟ್ ಪರೀಕ್ಷೆ ನಡೆಯಲಿದೆ.
ಈ ಮೊದಲು ಮಾರ್ಚ್ 12ರಂದು ನಿಗದಿಯಂತೆ ಪಿಜಿ ನೀಟ್ ಪರೀಕ್ಷೆ ನಡೆಯಬೇಕಿತ್ತು. ಆದರೆ ಇದನ್ನು ಆರೆಂಟು ವಾರಗಳ ಮಟ್ಟಿಗೆ ಮುಂದೂಡಲು ಕೇಂದ್ರ ಆರೋಗ್ಯ ಸಚಿವಾಲಯ ತೀರ್ಮಾನಿಸಿತ್ತು. 2021ರ ನೀಟ್ ಪಿಜಿ ಕೌನ್ಸಿಲಿಂಗ್ ಪ್ರಕ್ರಿಯೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಣಯ ತೆಗೆದುಕೊಂಡಿತ್ತು. ಬಳಿಕ ಇದೀಗ ಮರು ವೇಳಾಪಟ್ಟಿ ಪ್ರಕಟಿಸಿದೆ. ಈ ಪ್ರಕಾರ ಮೇ. 21 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ನೀಟ್ ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಪರೀಕ್ಷಾ ಮಂಡಳಿ ತಿಳಿಸಿದೆ.
ಈ ಹಿಂದೆ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕಲು ಫೆ.4 ಕೊನೆಯ ದಿನಾಂಕವಾಗಿತ್ತು. ಇದೀಗ ಈ ದಿನಾಂಕವನ್ನು ಮಾರ್ಚ್ 25ರ ವರೆಗೆ ವಿಸ್ತರಿಸಲಾಗಿದೆ.
PublicNext
04/02/2022 10:54 pm