ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮೀಣ ಗ್ರಂಥಾಲಯಗಳಿಗೆ ಸಂವಿಧಾನ ಪುಸ್ತಕ ಕಡ್ಡಾಯ

ಬೆಂಗಳೂರು: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಲು ಗ್ರಂಥಾಲಯಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ನಾನಾ ಸುಧಾರಣೆಗಳೊಂದಿಗೆ ಉನ್ನತೀಕರಣ, ಡಿಜಿಟಲೀಕರಣ ಮಾಡಲಾಗಿದೆ. ಸದ್ಯ ಗ್ರಾಮೀಣ (ಗ್ರಾ.ಪಂ) ಗ್ರಂಥಾಲಯದಲ್ಲಿ 'ಭಾರತ ಸಂವಿಧಾನ' ಪುಸ್ತಕ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಇದರೊಂದಿಗೆ ಮೂಲಭೂತವಾಗಿ 'ಭಾರತ ಸಂವಿಧಾನ' ಪುಸ್ತಕ ಹೊಂದುವುದು ಕಡ್ಡಾಯ ಎಂದು ಸೂಚಿಸಲಾಗಿದೆ.ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಉತ್ತಮ ಶೈಕ್ಷಣಿಕ ಮಾಹಿತಿ ಗ್ರಾಮೀಣ ಭಾಗದವರಿಗೂ ಒದಗಿಸುವ ಮೂಲ ಉದ್ದೇಶದಿಂದ ರಾಜ್ಯ ಸರಕಾರ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸುತ್ತಿದೆ. ಮೊದಲ ಹಂತದಲ್ಲಿ ಭಾರತ ಸಂವಿಧಾನ ಪುಸ್ತಕ ಇರಿಸುವುದು ಕಡ್ಡಾಯಗೊಳಿಸಲಾಗಿದೆ.

ಇತರೆ ಕಡ್ಡಾಯ ಪುಸ್ತಕಗಳು

• ಕನ್ನಡ ಶಬ್ದಕೋಶ

• ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮ- 1993

• ಸ್ಪರ್ಧಾತ್ಮಕ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿ

• ಮಕ್ಕಳಿಗೆ ಸಂಬಂಧಿಸಿದ ವಾರ/ಮಾಸಿಕ/ವಾರ್ಷಿಕ ಪತ್ರಿಕೆಗಳು

• ನಕ್ಷೆಗಳು

• ಮಕ್ಕಳ ಹಕ್ಕುಗಳ ಪೋಸ್ಟರ್ ಗಳು

Edited By : Nirmala Aralikatti
PublicNext

PublicNext

15/01/2022 09:12 am

Cinque Terre

74.82 K

Cinque Terre

4

ಸಂಬಂಧಿತ ಸುದ್ದಿ