ಬೆಂಗಳೂರು: ಪ್ರಸಕ್ತ ವರ್ಷದ 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ತಿಂಗಳ ಕಾಲ ಮುಂದೂಡಲ್ಪಡುವ ಸಂಭವ ಇದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯಲ್ಲಿ ಎಕ್ಸಾಂ ಮಾಡ ಲಾಗುತ್ತಿತ್ತು. ಅದರೆ ಕೊವೀಡ್ ನಿಂದಾಗಿ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭ ವಿಳಂಬವಾಗಿದೆ.
ಈ ಕಾರಣದಿಂದ ಪಠ್ಯದಲ್ಲೂ ಕಡಿತ ಮಾಡಲಾಗಿದೆ. ಪರಿಣಾಮ ಸಿಲೆಬೇಸ್ ಮುಗಿಸಲು ಮಾರ್ಚ್ ತಿಂಗಳ ಕೊನೆ ಆಗಬಹುದು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅನಧಿಕೃತ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ರವರ ಮಾಹಿತಿ ನೀಡಿದ್ದಾರೆ.
ಇನ್ನೂ ಪಿಯು ಬೋರ್ಡ್, ಎಸ್ ಎಸ್ ಎಲ್ ಸಿ ಬೋರ್ಡ್ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದೆ.
ಅಲ್ಲಿ ಎಕ್ಸಾಂ ನಡೆಸುವ ಬಗ್ಗೆ ವೇಳಾಪಟ್ಟಿ, ಭದ್ರತೆ, ರಿಸಲ್ಟ್ ಬಗ್ಗೆಯೆಲ್ಲಾ ಚರ್ಚೆಗಳು ಆಗಲಿದೆ. ಪಿಯು ಬೋರ್ಡ್ ಕಚೇರಿಯಲ್ಲಿ ನಭೆ ನಡೆಯಲಿದೆ.
PublicNext
28/12/2021 10:27 pm