ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಶುಲ್ಕ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದು, ಪ್ರತಿ ವಿದ್ಯಾರ್ಥಿಯಿಂದ ಹೆಚ್ಚುವರಿ 100 ರೂಪಾಯಿ ಪಾವತಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿಸಿದೆ.
ಕಳೆದ 2019-20ನೇ ಸಾಲಿನಲ್ಲಿ ಪರೀಕ್ಷೆ ನಡೆಸಿದಾಗ, SOP ಅನುಪಾಲನೆಯಿಂದಾಗಿ ಮಂಡಳಿ ಆಯವ್ಯಯದಲ್ಲಿ ಹಂಚಿಕೆ ಮಾಡಿಕೊಂಡಿದ್ದ ಅನುದಾನಕ್ಕಿಂತ ಒಟ್ಟಾರೆ ಸುಮಾರು 10.61ಕೋಟಿ ರೂಗಳು ಹೆಚ್ಚುವರಿ ವೆಚ್ಚವಾಗಿದೆ.
ಈ ಹೆಚ್ಚುವರಿ ಹೊರೆಯನ್ನು ಸರಿದೂಗಿಸಲು ಪ್ರತಿ ವಿದ್ಯಾರ್ಥಿಗಳಿಗೆ ತಲಾ 100 ರೂಪಾಯಿ ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ಪ್ರಥಮ ಬಾರಿಗೆ ಹಾಜರಾಗುವ ಶಾಲಾ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ 485 ರಿಂದ 585 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಲ್ಯಾಮಿನೇಷನ್ ಶುಲ್ಕ 22 ರೂ. ಇದ್ದು ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಒಂದು ವಿಷಯಕ್ಕೆ- 320 ರೂ. ಇದ್ದದ್ದು, ಇದೀಗ 370 ರೂ.ಗೆ ಏರಿಕೆ
ಎರಡು ವಿಷಯಕ್ಕೆ- 386 ರೂ. ಯಿಂದ 461 ರೂ.ಗೆ ಏರಿಕೆ.
ಮೂರು ವಿಷಯ ಹಾಗೂ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ- 520 ರೂ.ಗಳಿಂದ 620 ರೂ.ಗಳಿಗೆ ಏರಿಕೆ.
PublicNext
08/12/2021 10:53 pm