ಬೆಂಗಳೂರು: ಪ್ರಸಕ್ತ ಸಾಲಿನ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ಮಧ್ಯ ವಾರ್ಷಿಕ ಪರೀಕ್ಷೆಯ ಬೆಳಗಿನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಬೆಳಗಿನ ಅವಧಿಯ ಪರೀಕ್ಷೆ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9.30ರಿಂದ 12.45ರವರೆಗೆ ಎಕ್ಸಾಂ ನಿಗದಿ ಮಾಡಲಾಗಿದೆ. ಈ ಮುಂಚೆ ಬೆಳಗ್ಗೆ 9ರಿಂದ 12.15ರ ವರೆಗೆ ಪರೀಕ್ಷೆಯ ಸಮಯ ನಿಗದಿಯಾಗಿತ್ತು. ಮಧ್ಯಾಹ್ನದ ಅವಧಿ 2ರಿಂದ 5.15ರ ವರೆಗೆ ಎಂದಿನಂತೆ ಪರೀಕ್ಷೆ ನಡೆಯಲಿದೆ.
PublicNext
04/12/2021 04:16 pm