ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಸಭ್ಯ ವರ್ತನೆ ಆರೋಪ ಸತ್ಯಕ್ಕೆ ದೂರ, ಯಾವುದೇ ತನಿಖೆಗೂ ಸಿದ್ಧ; ಡಿ.ಸಿ. ಸ್ಪಷ್ಟನೆ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಶಾಲಾ ಶುಲ್ಕ ನಿಗದಿ ಸಂಬಂಧ ಜಿಲ್ಲಾ ಸಮಿತಿ ಯಾವುದೇ ಕ್ರಮ ತೆಗೆದು ಕೊಳ್ಳದ್ದನ್ನು ಪ್ರಶ್ನಿಸಿದ ಪೋಷಕರ ವಿರುದ್ಧ ಅಸಭ್ಯವಾಗಿ ವರ್ತಿಸಿದ ಆರೋಪ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ ಮೇಲೆ ಕೇಳಿ ಬಂದಿತ್ತು. "ಈ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ಧ. ಸತ್ಯಾಸತ್ಯತೆ ಹೊರಬರಲಿ" ಎಂದು ಡಿ.ಸಿ.ಯೇ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ 'ಪಬ್ಲಿಕ್ ನೆಕ್ಸ್ಟ್' ಜೊತೆ ಮಾತನಾಡಿದ ಜಿಲ್ಲಾಧಿಕಾರಿ, ಪೋಷಕರು ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಯನ್ನು ವಿಚಾರಿಸಲಾಗಿದೆ. ಎರಡು ವರ್ಷದಿಂದ ಬೇಸಿಕ್ ಫೀ ಕೂಡ ಕಟ್ಟಿಲ್ಲ ಅವ್ರು!

ಅದನ್ನು ನೇರವಾಗಿ ಪ್ರಶ್ನೆ ಮಾಡಿದ್ದೇನೆ. ಖಾಸಗಿ ಶಾಲಾ ಶಿಕ್ಷಣ ಬೇಕಾದ್ರೆ ನಿಯಮ ಪಾಲನೆ ಮಾಡಲಿ. ಕೋವಿಡ್ ಟೈಂ ಉಚಿತ ಶಿಕ್ಷಣ ಪಡೆದು ಫೀಸ್ ಕಟ್ಟಲ್ಲ ಅಂದ್ರೆ ಹೇಗೆ ? ಎಂದು ಮರುಪ್ರಶ್ನೆ ಹಾಕಿದ್ದಾರೆ.

ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿರುವ ಖಾಸಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಜಿ.ರವಿ ಕುಮಾರ್ , ಲಕ್ಷ್ಮಿ ನಾರಾಯಣ, ಡಾ.ಅರುಣ್ ಕುಮಾರ್ ಬೆಂಗಳೂರು ನಗರ ಜಿಲ್ಲೆ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.

ಇದಕ್ಕೆ ಅಧ್ಯಕ್ಷರಾಗಿರುವ ಹಾಗೂ ಬೆಂಗಳೂರು ಡಿ.ಸಿ. ಜೆ.ಮಂಜುನಾಥ್ ಜಿಲ್ಲಾ ಸಮಿತಿ ಸಭೆಯಲ್ಲಿ ಪೋಷಕರ‌‌ ಮೇಲೆ "ಹೇಯ್, ಸುಮ್ನೆ ಕೂತ್ಕೊಳ್ಳಯ್ಯ...ಎಷ್ಟು ಮಾತನಾಡ್ತೀಯ. ಡಿಪಾರ್ಟ್‌ಮೆಂಟ್ ನಿಂದಾ....? ನಿಂಗೆ ಬಿಟ್ಟಿ ಎಜುಕೇಶನ್ ಬೇಕಾ? ಫೀಸು ಕಟ್ಟೋಕೆ ಆಗಲ್ವ..? ಎಂತಾ ಪೇರೆಂಟ್ಸ್ ನೀವು?" ಈ ರೀತಿಯ ಪದ ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.ಮಾನವ ಹಕ್ಕು ಆಯೋಗ ದೂರನ್ನು ಗಂಭೀರವಾಗಿ ಪರಿಗಣಿಸಿದೆ. "ಯಾವುದೇ ತನಿಖೆಗೆ ಸಿದ್ಧ. ಸತ್ಯ ಹೊರಬರಲಿ" ಎಂದು ಡಿ.ಸಿ. ಮಂಜುನಾಥ್ ತಿಳಿಸಿದ್ದಾರೆ.

Edited By : Manjunath H D
PublicNext

PublicNext

24/11/2021 10:13 am

Cinque Terre

39.03 K

Cinque Terre

10

ಸಂಬಂಧಿತ ಸುದ್ದಿ