ಬೆಂಗಳೂರು: ಕಳೆದರಡು ವರ್ಷಗಳಿಂದ ವಿಳಂಬವಾಗಿದ್ದ ಎಸ್ಎಸ್ಎಲ್‌ಸಿ ಪರೀಕ್ಷೆಗಳು ಈ ವರ್ಷವೂ ಬಹುತೇಕ ವಿಳಂಬವಾಗುವ ಸಾಧ್ಯತೆ ಇದೆ.
2021-22ನೇ ಸಾಲಿನ ಶೈಕ್ಷಣಿಕ ಅವಧಿ ವಿಳಂಬ ಹಾಗೂ ಪಠ್ಯಕ್ರಮ ಪರಿಪೂರ್ಣಗೊಳಿಸಲು ಕಾಲಾವಕಾಶದ ಅವಶ್ಯಕತೆ ಇರುವುದರಿಂದ ಈ ಬಾರಿಯೂ ಎಸ್ಎಸ್ಎಲ್‌ಸಿ (SSLC) ಪರೀಕ್ಷೆ ವಿಳಂಬವಾಗುವ ಸಾಧ್ಯತೆ. ಪರೀಕ್ಷೆಯನ್ನು 2022ರ ಮೇ-ಜೂನ್ ವೇಳೆಗೆ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಿಂದ ಏಪ್ರಿಲ್ ಮೊದಲ ವಾರದೊಳಗೆ ಎಸ್ಎಸ್ಎಲ್‌ಸಿ ಪರೀಕ್ಷೆ ಮುಗಿಯುತ್ತಿತ್ತು. ಈ ಬಾರಿ ನವೆಂಬರ್ ಮುಗಿಯುತ್ತಿದ್ದರೂ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಈ ಬಾರಿಯೂ ಎಸ್ಎಸ್ಎಲ್‌ಸಿ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
PublicNext
21/11/2021 10:00 am