ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಮುಂದೂಡಿಕೆ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರೀತಿಯಲ್ಲೇ ಮಧ್ಯ ವಾರ್ಷಿಕ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿದಿದೆ.

ಡಿಸೆಂಬರ್ 9ರಿಂದ ಡಿಸೆಂಬರ್ 23ರ ವರೆಗೆ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿ ನಿಗದಿ ಮಾಡಲಾಗಿದೆ.

ಆದರೆ, ಈ ಮೊದಲಿನಂತೆಯೇ ಮಧ್ಯ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾ ಮಟ್ಟದ ಉಪ ನಿರ್ದೇಶಕರುಗಳಿಗೆ ನೀಡಲಾಗುತ್ತದೆ. ಅದರ ಮುದ್ರಣ ಹಾಗೂ ಕಾಲೇಜು ವಿತರಣೆ ಜವಾಬ್ದಾರಿ ಅವರದ್ದಾಗಿರಲಿದೆ ಎಂದು ಪಿಯು ಬೋರ್ಡ್ ಅದೇಶ ಹೊರಡಿಸಿದೆ.

ಈ ಬಗ್ಗೆ ನಿನ್ನೆಯೆ 'ಪಬ್ಲಿಕ್ ನೆಕ್ಸ್ಟ್' ವರದಿ ಮಾಡಿತ್ತು. ಪಿಯು ಬೋರ್ಡ್ ಮಧ್ಯ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು‌ ಹಾಗೂ ಮೌಲ್ಯಮಾಪನಕ್ಕೂ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಮುಂದಾಗಿತ್ತು. ಸಿಬಿಎಸ್‌ಸಿ, ಐಸಿಎಸ್‌ಇ ಮಧ್ಯ ವಾರ್ಷಿಕ ಪರೀಕ್ಷೆ ಬಗ್ಗೆ ಮೊದಲೇ ಮಾಹಿತಿ ನೀಡಿತ್ತು.

ಆದರೆ, ಪಿಯು ಬೋರ್ಡ್ ವಿರುದ್ಧ ವಿದ್ಯಾರ್ಥಿಗಳು ನಿನ್ನೆ ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಪಿಯು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಒತ್ತಡಕ್ಕೆ ಪಿಯು ಬೋರ್ಡ್ ಮಣಿದಿದೆ.

Edited By : Nagaraj Tulugeri
PublicNext

PublicNext

18/11/2021 10:46 pm

Cinque Terre

31.64 K

Cinque Terre

0

ಸಂಬಂಧಿತ ಸುದ್ದಿ