ಬೆಂಗಳೂರು : ಅ.25 ರಿಂದ ರಾಜ್ಯದಲ್ಲಿ 1-5 ನೇ ತರಗತಿಗಳು ಆರಂಭವಾಗಲಿದ್ದು ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ. ಇನ್ನು 25 ರಿಂದ ಅರ್ಧದಿನ ಮಾತ್ರ ತರಗತಿ ನಡೆಸುವಂತೆ ಸೂಚಿಸಿರುವ ಸರ್ಕಾರ ನವೆಂಬರ್ 2 ರಿಂದ ಇಡಿ ದಿನ ತರಗತಿ ನಡೆಸಲು ಸೂಚನೆ ನೀಡಿದೆ.
ಇನ್ನು ಕೊರೊನಾ ನಿಯಮಗಳನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು. 20 ಮಕ್ಕಳ ತಂಡ ಮಾಡಿ ಪಾಠ ಪ್ರವಚನ ಮಾಡಬೇಕು. ಶೇ.50 ರಷ್ಟು ಮಕ್ಕಳಿಗೆ ಮಾತ್ರ ಕೊಠಡಿಯಲ್ಲಿ ಆಸನದ ವ್ಯವಸ್ಥೆ ಮಾಡಬೇಕು.
ನವೆಂಬರ್ 2 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ ಸಂಜೆ 4.30 ವರೆಗೆ, ಶನಿವಾರ ಬೆಳಗ್ಗೆ 8 ರಿಂದ 11.40 ರ ವರೆಗೆ ತರಗತಿ ಆರಂಭವಾಗಲಿದೆ. ಯಾವುದೇ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತೆರೆಯಲು ಅವಕಾಶ ನೀಡಿಲ್ಲ.
PublicNext
21/10/2021 07:16 pm