ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಇಟಿ ಫಲಿತಾಂಶ: ಮೈಸೂರಿನ ಎಲ್ಲ 5 ವಿಭಾಗದಲ್ಲೂ ಮೈಸೂರಿನ ಮೇಘನ್ ಪ್ರಥಮ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಆಗಸ್ಟ್ 28 ಮತ್ತು 29ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟಗೊಂಡಿದೆ. ಮೈಸೂರಿನ ವಿದ್ಯಾರ್ಥಿ ಮೇಘನ್ ಎಚ್‌.ಕೆ. ಅವರು ಅಗ್ರಿಕಲ್ಚರ್, ಎಂಜಿನಿಯರಿಂಗ್ ಸೇರಿ ಎಲ್ಲಾ ಐದು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಫಲಿತಾಂಶ ಪ್ರಕಟಿಸಿದರು. ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಮೈಸೂರಿನ ರಾಮಕೃಷ್ಣ ನಗರದ ನಿವಾಸಿ ಮೇಘನ್ ಎಚ್‌.ಕೆ.ಅವರು ಮೊದಲ ಸ್ಥಾನ ಪಡೆದಿದ್ದಾರೆ. ಇವರ ತಂದೆ ಕೆ.ಆರ್.ನಗರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ತಾಯಿ ಲೀಲಾವತಿ ನೃಪತುಂಗ ಕನ್ನಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಮೇಘನ್'ಪ್ರಮತಿ ಹಿಲ್ ವ್ಯೂ ಅಕಾಡೆಮಿ’ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಎಲ್ಲ ನಾಲ್ಕೂ ವಿಭಾಗಗಳಲ್ಲೂ (ಬಿ–ಫಾರ್ಮಾ, ಎಂಜಿನಿಯರಿಂಗ್, ಬಿಎನ್‌ವೈಎಸ್, ಬಿಎಸ್ಸಿ ಅಗ್ರಿಕಲ್ಚರ್, ಬಿವಿಎಸ್‌ಇ) ಮೇಘನ್ ಮೊದಲ ಸ್ಥಾನ ಪಡೆದಿದ್ದಾರೆ.

ಸಿಇಟಿ ಪರೀಕ್ಷೆಗೆ ಒಟ್ಟು 2,01,834 ಮಂದಿ ಅರ್ಜಿ ಸಲ್ಲಿಸಿದ್ದರು. 1,93,447 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನ್ಯಾಚುರೋಪತಿ ಮತ್ತು ಯೋಗಕ್ಕೆ– 1,55,910, ಎಂಜಿನಿಯರಿಂಗ್–1,83,231, ಕೃಷಿ ವಿಜ್ಞಾನ– 1,52,518, ಬಿ ಫಾರ್ಮ್ 1,86,638 ಹಾಗೂ ಪಶು ವೈದ್ಯಕೀಯಕ್ಕೆ 155760 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಎಂಜಿನಿಯರ್

1. ಮೇಘನ್ (ಮೈಸೂರು)

2. ಪ್ರೇಮಾಂಕುರ್ ಚಕ್ರಬರ್ತಿ( ಬೆಂಗಳೂರು)

3. ಬಿ.ಡಿ.ಅನುರುದ್( ಬೆಂಗಳೂರು)

ಬಿಎನ್‍ವೈಎಸ್ ರಾಂಕ್

1. ಮೇಘನ್( ಮೈಸೂರು)

2. ವರುಣ್ ಆದಿತ್ಯಾ( ಬೆಂಗಳೂರು)

3. ರೀಥಮ್( ಮಂಗಳೂರು)

ಬಿಎಸ್ಸಿ- ಕೃಷಿ

1. ಮೇಘನ್ – ಮೈಸೂರು

2. ರೀಥಮ್- ಮಂಗಳೂರು

3. ಆದಿತ್ಯಾ ಪ್ರಭಾಸ್- ಬೆಂಗಳೂರು

ಬಿ.ವಿ.ಎಸ್.ಸಿ(ಪಶು ಸಂಗೋಪನೆ)

1. ಮೇಘನ್- ಮೈಸೂರು

2. ವರುಣ್ ಅದಿತ್ಯಾ-ಬೆಂಗಳೂರು

3. ರೀಥಮ್- ಮಂಗಳೂರು

ಬಿ ಫಾರ್ಮ್

1. ಮೇಘನ್- ಮೈಸೂರು

2. ಪ್ರೇಮಾಂಕುರ್ ಚಕ್ರಬರ್ತಿ- ಬೆಂಗಳೂರು

3. ಬಿ.ಎಸ್. ಅನುರುದ್ – ಬೆಂಗಳೂರು

Edited By : Vijay Kumar
PublicNext

PublicNext

20/09/2021 06:16 pm

Cinque Terre

80.37 K

Cinque Terre

0

ಸಂಬಂಧಿತ ಸುದ್ದಿ