ಕೋಲ್ಕತ್ತಾ: ಶಾಲೆ ಕಲಿಸೋ ಟೀಚರ್ ಅಂದ್ರೆ ಮಕ್ಕಳಿಗೆ, ಮಕ್ಕಳ ಪೋಷಕರಿಗೂ ಪ್ರೀತಿ ಗೌರವ ಇರುತ್ತೆ. ಶಿಕ್ಷಕರ ವರ್ಗಾವಣೆ ಮಾಡ್ಬೇಡಿ ಅಂತ ಪ್ರತಿಭಟನೆ ನಡೆಸಿದ ಸುದ್ದಿಯನ್ನು ಕೇಳಿರುತ್ತೇವೆ, ಆದರೆ ಇದು ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಶಿಕ್ಷಕರ ವರ್ಗಾವಣೆಯನ್ನು ಮಾಡಬೇಡಿ ಎಂದು ಪ್ರತಿಭಟಿಸಿದ ಘಟನೆ ನಡೆದಿದೆ.
ಕೋಲ್ಕತ್ತಾದ ಸೀಲ್ದಾಹ್ ದಕ್ಷಿಣ ವಿಭಾಗದ ಗೌರ್ದಾಹ್ ನಿಲ್ದಾಣದಲ್ಲಿ ರೈಲು ತಡೆ ಪ್ರತಿಭಟನೆ ನಡೆದಿದೆ. ಈ ರೈಲು ತಡೆದವರು ಬೇರೆ ಯಾರೊ ಆಗಿದ್ದರೆ ಈ ಸುದ್ದಿ ಇಷ್ಟು ಸಂಚಲನ ಮೂಡಿಸುತ್ತಿರಲಿಲ್ಲ. ಬದಲಿಗೆ, ರೈಲು ತಡೆಗಟ್ಟಿದವರು ವಿದ್ಯಾರ್ಥಿಗಳು. ಕೋಲ್ಕತ್ತಾದ ಕ್ಯಾನಿಂಗ್‌ನಲ್ಲಿರುವ ಗೌರ್ದಾಹ್ ನಾರಾಯಣಪುರ ಅಕ್ಷಯ ವಿದ್ಯಾಮಂದಿರದ ವಿದ್ಯಾರ್ಥಿಗಳೇ ಈ ರೈಲು ತಡೆ ಸಾಹಸ ಕೈಗೊಂಡವರು.
ನಾರಾಯಣಪುರ ಅಕ್ಷಯ ವಿದ್ಯಾಮಂದಿರದದ ಐವರು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿತ್ತು. ಇದು ವಿದ್ಯಾರ್ಥಿಗಳಲ್ಲಿ ಭಾರೀ ಸಿಟ್ಟು, ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿ ಶಾಲಾ ಬಟ್ಟೆ ಧರಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
PublicNext
20/09/2022 06:43 pm