ಮೊರದಾಬಾದ್: ಶಾಲೆಯ ಕೋಣೆಯೊಳಗೆ ಬಾಲಕಿ ಇರುವುದನ್ನು ಗಮನಿಸದೇ ಶಾಲಾ ಸಿಬ್ಬಂದಿ ಬೀಗ ಹಾಕಿ ಯಡವಟ್ಟು ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಗುರೇರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಬಾಲಕಿ ಒಂದನೇ ತರಗತಿಯಲ್ಲಿ ಓದುತ್ತಿದ್ದು ಶಾಲೆಗೆ ಬೀಗ ಹಾಕಿದ ವೇಳೆ ಆಕೆ ನಿದ್ದೆಯ ಮಂಪರಿನಲ್ಲಿದ್ದಾಳೆ. ಆಗ ಇದನ್ನು ಗಮನಿಸದ ಸಿಬ್ಬಂದಿ ಬೀಗ ಹಾಕಿದ್ದಾರೆ. ಅದರ ಮರುದಿನ ಶಾಲೆಗೆ ರಜೆ ಘೋಷಿಸಲಾಗಿತ್ತು. ಕೆಲಹೊತ್ತಿನ ನಂತರ ನಿದ್ದೆಯಿಂದ ಎಚ್ಚೆತ್ತ ಬಾಲಕಿ ಅಳತೊಡಗಿದ್ದಾಳೆ.
ಇತ್ತ ಮಗಳು ಎಂದಿನಂತೆ ಶಾಲೆಯಿಂದ ಮನೆಗೆ ಬಾರದ ಹಿನ್ನೆಲೆ ಪೋಷಕರು ಆತಂಕಗೊಂಡು ಅತ್ತಿಂದಿತ್ತ ಹುಡುಕಾಡಿದ್ದಾರೆ. ಕೊನೆಗೆ ಶಾಲೆ ಸುತ್ತ ಬಂದು ಹುಡುಕಾಡುತ್ತಿರುವಾಗ ಬಾಲಕಿ ಅಳುವ ಸದ್ದು ಕೇಳಿದೆ. ಕೂಡಲೇ ಶಾಲೆಯ ಮುಖ್ಯ ಶಿಕ್ಷಕರಿಗೆ ವಿಷಯ ಮುಟ್ಟಿಸಲಾಗಿ ಅವರು ಬಂದು ಕೋಣೆಯ ಕೀಲಿ ತೆರೆದಿದ್ದಾರೆ. ನಂತರ ಬಾಲಕಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಈ ವಿಷಯ ಮೊರಾದಾಬಾದ್ ಜಿಲ್ಲೆಯ ಹಿರಿಯ ಶಿಕ್ಷಣಾಧಿಕಾರಿಗಳ ಗಮನಕ್ಕೆ ಹೋಗಿದೆ. ಅವರು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
PublicNext
07/08/2022 09:40 pm