ಲಕ್ನೋ : ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಶಾಲೆವೊಂದು ಜಲಾವೃತಗೊಂಡಿದೆ. ಈ ವೇಳೆ ಮಕ್ಕಳನ್ನು ರಕ್ಷಣೆ ಮಾಡಬೇಕಾದ ಶಿಕ್ಷಕಿ ಮಕ್ಕಳಿಂದಲೇ ಸಹಾಯ ಪಡೆದು ಪ್ರವಾಹದ ನೀರು ದಾಟಿದ ವಿಡಿಯೋವೊಂದು ವೈರಲ್ ಆಗಿದೆ.
ಹೌದು ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳು ಹಾಕಿದ್ದ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ನಡೆಯುತ್ತಾ ಮಳೆ ನೀರನ್ನು ದಾಟಿದ್ದಾರೆ. ಸದ್ಯ ಶಿಕ್ಷಕಿಯ ಅತಿರೇಕದ ವರ್ತನೆಗೆ ಆಕ್ರೋಶವೂ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಶಿಕ್ಷಕಿಯನ್ನು ಅಮಾನತು ಸಹ ಮಾಡಲಾಗಿದೆ.
ಪ್ಲಾಸ್ಟಿಕ್ ಕುರ್ಚಿಗಳನ್ನು ಸಾಲಾಗಿ ಜೋಡಿಸಿದ್ದ ಮಕ್ಕಳು ತಮ್ಮ ಶಿಕ್ಷಕಿ ಒಂದೊಂದೇ ಕುರ್ಚಿಗಳ ಮೇಲೆ ಕಾಲಿಡುವಾಗ ಆ ಕುರ್ಚಿ ಅಲುಗಾಡದಂತೆ ಹಿಡಿದುಕೊಂಡಿದ್ದರು. ಮೊಣಕಾಲಿನವರೆಗೆ ನಿಂತಿದ್ದ ಮಳೆ ನೀರಿನಲ್ಲಿ ನಿಂತು ಶಿಕ್ಷಕಿಯನ್ನು ಶಾಲೆಯೊಳಗೆ ದಾಟಿಸಿದ ವಿದ್ಯಾರ್ಥಿಗಳಿಗೆ ಸುತ್ತಲೂ ಇದ್ದ ಶಿಕ್ಷಕರು ಹುರಿದುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
PublicNext
28/07/2022 07:06 pm