ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಹಿಜಾಬ್ ತೆಗೆಯಬೇಕೆಂದು ಕಾಲೇಜಿನ ವಾಟ್ಸ್ಆಪ್ ಗ್ರುಪ್‌ನಲ್ಲಿ ಹಾಕಿಲ್ಲ: ಕ್ಯಾತೆ ತೆಗೆದ ವಿದ್ಯಾರ್ಥಿನಿಯರು

ವಿಜಯಪುರ: ಹಿಜಾಬ್ ಧರಿಸಿದವರಿಗೆ ತರಗತಿಯಲ್ಲಿ ಪ್ರವೇಶವಿಲ್ಲ ಎಂದು ನಮಗೆ ಕಾಲೇಜಿನ ವಾಟ್ಸ್ಆಪ್ ಗ್ರುಪ್‌ನಲ್ಲಿ ಮಾಹಿತಿ ಹಾಕಿಲ್ಲ ಎಂದು ವಿದ್ಯಾರ್ಥಿನಿಯರು ಕ್ಯಾತೆ ತೆಗೆದಿದ್ದಾರೆ. ವಿಜಯಪುರ ನಗರದ ಸರ್ಕಾರಿ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿದ್ದು ವಿದ್ಯಾರ್ಥಿನಿಯರು ತಮಗೆ ಪ್ರವೇಶ ನಿರಾಕರಿಸಿದ ಕಾಲೇಜಿನ ಪ್ರಾಚಾರ್ಯರೊಂದಿಗೆ ಈ ರೀತಿ ವಾದ ಮಾಡಿದ್ದಾರೆ.

ಶಾಲಾ-ಕಾಲೇಜು ಆವರಣಗಳಲ್ಲಿ ಯಾವುದೇ ಧಾರ್ಮಿಕ ಸೂಚಕಗಳನ್ನು ಧರಿಸಬಾರದು ಎಂಬ ನಿಯಮ ಇದೆ. ಈ ಬಗ್ಗೆ ಟಿವಿ, ನ್ಯೂಸ್ ಪೇಪರ್‌ಗಳಲ್ಲಿ ಸುದ್ದಿ ಪ್ರಕಟವಾಗಿದೆ. ಇದು ನಿಮಗೆ ಗೊತ್ತಿಲ್ವಾ? ಎಂದು ಪ್ರಾಚಾರ್ಯರು ಕೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿನಿಯರು ಇದೆಲ್ಲ ನಮಗೆ ಗೊತ್ತಿಲ್ಲ ಸರ್. ನೀವು ಹಿಜಾಬ್‌ಗೆ ಅವಕಾಶ ಇಲ್ಲ ಎಂದು ಕಾಲೇಜಿನ ವಾಟ್ಸ್ಆಪ್ ಗ್ರುಪ್‌ನಲ್ಲಿ ಹಾಕಿಲ್ಲ ಎಂದು ವಾದ ನಡೆಸಿದ್ದಾರೆ. ಪ್ರಾಚಾರ್ಯ ಹಾಗೂ ಕಾಲೇಜಿನ ಸಿಬ್ಬಂದಿ ಮನವೊಲಿಸಿದರೂ ಕೇಳದ ವಿದ್ಯಾರ್ಥಿನಿಯರು ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯೋದಿಲ್ಲ. ನಮಗೆ ಹಿಜಾಬ್ ಬೇಕು, ಶಿಕ್ಷಣವೂ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ತರಗತಿ ಪ್ರವೇಶಕ್ಕೆ ಒಪ್ಪದಿದ್ದಾಗ ವಿದ್ಯಾರ್ಥಿನಿಯರು ಕೆಲಹೊತ್ತು ಕಾಲೇಜು ಆವರಣದಲ್ಲೇ ಪ್ರತಿಭಟನೆ ನಡೆಸಿದರು. ಇನ್ನು ನಗರದ ಗಾಂಧಿಚೌಕ್ ಠಾಣೆ ಪೊಲೀಸರು ಕಾಲೇಜಿನ ಸುತ್ತ ಭದ್ರತೆ ಒದಗಿಸಿದ್ದಾರೆ.

Edited By : Manjunath H D
PublicNext

PublicNext

16/02/2022 02:24 pm

Cinque Terre

86.88 K

Cinque Terre

23

ಸಂಬಂಧಿತ ಸುದ್ದಿ