ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಭಾರತದ ಧ್ವಜ ನಮ್ಮ ಜೀವ ಉಳಿಸಿತು, ಭಾರತೀಯ ಎನ್ನಲು ಹೆಮ್ಮೆಯಾಗುತ್ತಿದೆ'

ಕೀವ್‌: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಸದ್ಯ ಉಕ್ರೇನ್ ದೇಶವನ್ನು ರಷ್ಯಾ ಸೇನಾಪಡೆ ಅಕ್ಷರಶಃ ಬಗ್ಗು ಬಡಿಯುತ್ತಿದೆ. ಅಲ್ಲಿನ ನಾಗರಿಕರಲ್ಲದೇ, ವಿದೇಶಿಗರೂ ಸಹ ಉಕ್ರೇನ್‌ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ಪೈಕಿ ಅನೇಕ ಭಾರತೀಯರೂ ಅಲ್ಲಿ ಸಿಲುಕಿಕೊಂಡಿದ್ದರು. ಇದೀಗ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ.

ಏರ್‌ಲಿಫ್ಟ್ ಮಾಡುವ ಪ್ರಕ್ರಿಯೆ ಮುಂದುವರೆದಿದ್ದು, ನಿನ್ನೆ ಉಕ್ರೇನ್‌ನಿಂದ ಭಾರತಕ್ಕೆ 2ನೇ ವಿಮಾನ ಆಗಮಿಸಿತ್ತು. ಇದರಲ್ಲಿ ಸುಮಾರು 250 ವಿದ್ಯಾರ್ಥಿಗಳು ಇದ್ದರು. ಈ ಪೈಕಿ ಕರ್ನಾಟಕದ 13 ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಈ ವೇಳೆ ಬಿಹಾರ ವಿದ್ಯಾರ್ಥಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ತಮಗಾಗಿರುವ ಅನುಭವವನ್ನು ಹೇಳಿಕೊಂಡಿದ್ದಾರೆ. ರಾಷ್ಟ್ರಧ್ವಜ ನೋಡಿ ಉಕ್ರೇನ್‌ ಮತ್ತು ರಷ್ಯಾದವರು ಯಾರೂ ನಮ್ಮನ್ನು ತಡೆಯಲಿಲ್ಲ ನಡೆಯಲಿಲ್ಲ. ಸುಲಭವಾಗಿ ನಾವು ಗಡಿಯನ್ನು ತಲುಪಿದ್ದೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದು, ಅದರ ವಿಡಿಯೋ ವೈರಲ್‌ ಆಗಿದೆ.

'ಭಾರತದ ಧ್ವಜ ಇದ್ದ ಕಾರಣ ನಾವು ಎಲ್ಲೂ ನಿಲ್ಲದೇ ಸುಲಭವಾಗಿ ಗಡಿಯನ್ನು ತಲುಪಿ ಸ್ವದೇಶವನ್ನು ತಲುಪಿದ್ದೇವೆ, ಧ್ವಜ ನಮ್ಮ ಪ್ರಾಣ ಕಾಪಾಡಿದೆ. ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತಿದೆ' ಎಂದು ಹೇಳಿದ್ದಾರೆ.

‘ನಾವು ಮೂರು ರಾಜ್ಯವನ್ನು ದಾಟಿ ಬಂದೆವು. ಗಡಿಯಲ್ಲಿ ಸೈನಿಕರು ಪೊಲೀಸರು ಎಲ್ಲರೂ ಇದ್ದರು. ಆದರೆ ನಮ್ಮ ರಾಷ್ಟ್ರಧ್ವಜವನ್ನು ನೋಡಿ ತಪಾಸಣೆ ಮಾಡದೇ ಬಿಟ್ಟರು. ರಾಷ್ಟ್ರಧ್ವಜದೊಂದಿಗೆ ಬರುವಂತೆ ರಾಯಭಾರ ಕಚೇರಿ ಸೂಚಿಸಿತ್ತು. ಅದರಂತೆ ರಾಷ್ಟ್ರಧ್ವಜವನ್ನು ಬ್ಯಾಗಿನ ಮುಂಭಾಗ ಸಿಕ್ಕಿಸಿಕೊಂಡು ಗಡಿಯನ್ನು ದಾಟಿ ಏರ್‌ ಇಂಡಿಯಾ ವಿಮಾನವನ್ನು ಹತ್ತಿದೆವು' ಎಂದು ವಿದ್ಯಾರ್ಥಿ ಹೇಳಿದ್ದಾರೆ.

Edited By : Vijay Kumar
PublicNext

PublicNext

27/02/2022 08:19 pm

Cinque Terre

202.67 K

Cinque Terre

42

ಸಂಬಂಧಿತ ಸುದ್ದಿ