ಸರ್ಕಾರ ಇದುವರೆಗೆ ರಾಜ್ಯದ ಸರ್ಕಾರಿ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುತ್ತಿತ್ತು ಸದ್ಯ ಈ ಯೋಜನೆಯಲ್ಲಿ ಕೊಂಚ ಬದಲಾವಣೆ ತಂದ ಉನ್ನತ ಶಿಕ್ಷಣ ಇಲಾಖೆ ಲ್ಯಾಪ್ ಟಾಪ್ ಬದಲಿಗೆ ಟ್ಯಾಬ್ ನೀಡಲಿದೆ.
ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ, ಪಾಲಿಟೆಕ್ನಿ ಕ್ ಕಾಲೇಜುಗಳ ಪ್ರಥಮ, ದ್ವಿತೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಿದೆ.
ಪಾಲಿಟೆಕ್ನಿ ಕ್ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ವರ್ಷದ ಒಟ್ಟು 28,908 ವಿದ್ಯಾರ್ಥಿಗಳಿಗೆ, ಇಂಜಿನಿಯರಿಂಗ್ ಹಂತದ ಮೂರು ವರ್ಷದ ಒಟ್ಟು 11, 488 ವಿದ್ಯಾರ್ಥಿಗಳಿಗೆ, ಪದವಿಯ ಪ್ರಥಮ ವರ್ಷದ ಒಟ್ಟು 1, 15, 000 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಿದ್ದು, ಇದಕ್ಕೆ ಒಟ್ಟು 155,40 ಕೋಟಿ ರೂ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ.
ಈ ಹಿಂದೆ ಸರ್ಕಾರ ಪ್ರತಿವರ್ಷ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿತ್ತು. ಇವುಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲ್ಯಾಪ್ ಟಾಪ್ ಬದಲು ಟ್ಯಾಬ್ ನೀಡಲು ಉನ್ನತ ಶಿಕ್ಷಣ ನಿರ್ಧಾರ ತೆಗೆದುಕೊಂಡಿದೆ.
ಟ್ಯಾಬ್ ನೀಡಲು ಸರ್ಕಾರದ ಒಪ್ಪಿಗೆ ಇದ್ದು, ಶೀಘ್ರವೇ ವಿದ್ಯಾರ್ಥಿಗಳ ಕೈಗೆ ಟ್ಯಾಬ್ ಸಿಗಲಿದೆ. 10,000 ಬೆಲೆಯ ಟ್ಯಾಬ್ ಇದಾಗಿದೆ.
PublicNext
19/12/2020 02:31 pm