ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು NEET ಫಲಿತಾಂಶ ಪ್ರಕಟ; ರಿಸಲ್ಟ್​ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು : ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್​ ಟೆಸ್ಟ್​) ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಸಂಜೆ 4 ಗಂಟೆಯ ವೇಳೆಗೆ ಎನ್​ಟಿಎ ಫಲಿತಾಂಶವನ್ನು ಘೋಷಿಸಲಿದೆ.

ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಫಲಿತಾಂಶವನ್ನು ntaneet.nic.in ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ಅಡ್ಮಿಟ್​ ಕಾರ್ಡ್​ನಲ್ಲಿ ತಮ್ಮ ರೋಲ್ ನಂಬರ್ ದಾಖಲಿಸಬೇಕು.

ನಂತರ ಫಲಿತಾಂಶವನ್ನು ವೀಕ್ಷಿಸಬಹುದು, ನೀಟ್ ಪರೀಕ್ಷೆಗಳ ಫಲಿತಾಂಶವನ್ನು ಅಕ್ಟೋಬರ್ 12ರಂದು ಪ್ರಕಟಿಸಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿತ್ತು. ಆದರೆ, ಬಳಿಕ ಅಕ್ಟೋಬರ್ 16ರಂದು ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿತ್ತು.

ಕೊರೋನಾ ಪ್ರೋಟೋಕಾಲ್ ನಡುವೆಯೂ ಸೆಪ್ಟೆಂಬರ್ 14ರಂದು ನೀಟ್ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. NEET ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ nta.ac.in, ntaneet.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕವೂ ಫಲಿತಾಂಶ ವೀಕ್ಷಿಸಬಹುದು.

* ಅಧಿಕೃತ ವೆಬ್​ಸೈಟ್ ntaneet.nic.in ಗೆ ಹೋಗಿ.

* ವೆಬ್​ಸೈಟ್​ನಲ್ಲಿರುವ ಡೌನ್​ಲೋಡ್​ ರಿಸಲ್ಟ್​ ಎಂಬಲ್ಲಿ ಕ್ಲಿಕ್ ಮಾಡಿ

* ನಿಮ್ಮ ರಿಜಿಸ್ಟ್ರೇಷನ್ ನಂಬರ್, ರೋಲ್ ನಂಬರ್ ನಮೂದಿಸಿ.

ಆಗ ನಿಮ್ಮ ಫಲಿತಾಂಶ ವೆಬ್​ಸೈಟ್​ನ ಸ್ಕ್ರೀನ್ ಮೇಲೆ ಕಾಣುವುದು.

* ಆ ಫಲಿತಾಂಶದ ಸ್ಕ್ರೀನ್ ಅನ್ನು ಡೌನ್​ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಬಿಎಸ್/ ಬಿಎಸ್​ಡಿ ಕೋರ್ಸ್​ಗಳಿಗೆ ಅಭ್ಯರ್ಥಿಗಳು ನೀಟ್​ನಲ್ಲಿ ಶೇ. 50ರಷ್ಟು ಅಂಕ ಪಡೆದು ತೇರ್ಗಡೆಯಾಗಬೇಕು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು ಶೇ. 40 ಅಂಕ ಪಡೆಯಬೇಕು. ಪಿಡಬ್ಲ್ಯುಡಿ ಅಭ್ಯರ್ಥಿಗಳು ಶೇ 45 ಅಂಕ ಪಡೆಯಬೇಕು.

ದೇಶಾದ್ಯಂತ ಸುಮಾರು 14.37 ಲಕ್ಷ ಅಭ್ಯರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದರು. ಕೊರೋನಾದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಅಕ್ಟೋಬರ್ 14ರಂದು ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಗಳ ಫಲಿತಾಂಶ ಇಂದು ಸಂಜೆ ಪ್ರಕಟವಾಗಲಿದೆ.

Edited By :
PublicNext

PublicNext

16/10/2020 09:09 am

Cinque Terre

89.42 K

Cinque Terre

3