ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಒತ್ತಾಯ

ದಾವಣಗೆರೆ: ಸಾಮಾಜಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕವಾಗಿ ಹಿಂದುಳಿದಿರುವ ಮಡಿವಾಳ ಸಮಾಜಕ್ಕೆ ಪ್ರೊ ಅನ್ನಪೂರ್ಣಮ್ಮ ವರದಿಯಂತೆ ಪರಿಶಿಷ್ಠ ಜಾತಿ ಮೀಸಲಾತಿ ನೀಡಬೇಕು. ಈ ಕುರಿತಂತೆ ಸರ್ಕಾರ ಸಮಗ್ರ ಚರ್ಚೆ ನಡೆಸಬೇಕೆಂದು ಶ್ರೀ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾ ಘಟಕ ಸರ್ಕಾರವನ್ನು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ ಅವರು, ಭಾರತದ 17 ರಾಜ್ಯ, 3 ಕೇಂದ್ರಾಳಿತ ಪ್ರದೇಶಗಳಲ್ಲಿ ಮಡಿವಾಳರನ್ನು ಪರಿಶಿಷ್ಠ ಜಾತಿಗೆ ಸೇರಿಸಲಾಗಿದೆ.

ಅಲ್ಲದೇ ಕರ್ನಾಟಕದಲ್ಲೂ ಮೈಸೂರು ವಿಶ್ವವಿದ್ಯಾನಿಲಯದ ಪೊ.ಅನ್ನಪೂರ್ಣೇಶ್ವರಿ ಅವರು 2007-08ರಲ್ಲಿ ರಾಜ್ಯ ಸರ್ಕಾರವು ನಿಯೋಜಿಸಿದ ಅಧ್ಯಯನವು ಮಡಿವಾರಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವ ಪರವಾಗಿ ವರದಿಯನ್ನು ಸಲ್ಲಿಸಿದ್ದರೂ, ಸರ್ಕಾರವು ಇನ್ನೂ ಕೇಂದ್ರಕ್ಕೆ ಶಿಫಾರಸನ್ನು ರವಾನಿಸಿಲ್ಲ. ರಾಜ್ಯ ಸರ್ಕಾರ ಅದಕ್ಕೆ ಮನ್ನಣೆ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದರು. ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ನಮ್ಮ ಸಮುದಾಯ ಹೊಂದಿದ್ದು, ಸುಮಾರು 50ವರ್ಷಗಳ ಬೇಡಿಕೆಯನ್ನು ಈವರೆಗೂ ಯಾವುದೇ ಸರ್ಕಾರಗಳು ಈಡೇರಿಸಲು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ ಮಾತನಾಡಿ, ನಮ್ಮ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದರೆ ಮುಂಬರುವ ದಿನಗಳಲ್ಲಿ ಬರಲಿರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು. ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿದ್ದು, ಇವುಗಳಲ್ಲಿ 40ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕು. ಜತೆಗೆ ಜಾತಿವಾರು ಮೀಸಲಾತಿ ನೀಡಲಿ. ರಾಜಾದ್ಯಂತ ಪಾದಯಾತ್ರೆ ನಡೆಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ವಿಧಾನ ಸೌಧದ ಅವರಣದಲ್ಲೇ ಬಟ್ಟೆ ತೊಳೆಯುವ ಕಾರ್ಯಕ್ಕೆ ಮುಂದಾಗುತ್ತೇವೆ. ನಮ್ಮನ್ನು ಪರಪ್ಪನ ಅಗ್ರಹಾರಕ್ಕೆ ಹಾಕಿದರೂ ಬಿಡುವುದಿಲ್ಲ. ನಾವು ಮಡಿವಾಳರು. ನಮ್ಮ ಮುಖ್ಯ ಧ್ಯೇಯ ಮಾಡು ಇಲ್ಲವೇ ಮಡಿ ಹಂತದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

Edited By : Manjunath H D
PublicNext

PublicNext

12/10/2022 04:36 pm

Cinque Terre

22.79 K

Cinque Terre

0